ಸ್ನೇಹ ಶಿಕ್ಷಣ ಸಂಸ್ಥೆಯು ಸುಳ್ಯ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಸುಮಾರು 1.25 ಕಿ .ಮೀ.ಗಳಷ್ಟು ದೂರವಿದ್ದು ಮಾಣಿ - ಮೈಸೂರು ರಾಜ್ಯ ಹೆದ್ದಾರಿಯ ಬಲಬದಿಯಲ್ಲಿ ಸ್ನೇಹಶಿಲಾ ಎಂಬಲ್ಲಿ ಸ್ಥಾಪನೆಯಾಗಿದೆ .
ಇದು ತನ್ನ ಮೊದಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು 1996ರಲ್ಲಿ ಪ್ರಾರಂಭಿಸಿ , ಬಳಿಕ 2000ದಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನು ಸ್ಥಾಪಿಸಿದೆ .
ಇಲ್ಲಿ ಬಾಲವಾಡಿಯಿಂದ 10ನೇಯ ತರಗತಿಯವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ .
ಈ ಶಿಕ್ಷಣ ಸಂಸ್ಥೆಯ ಆಡಳಿತದಲ್ಲಿ ಒಟ್ಟು ಎರಡು ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ .
ಹೆಸರೇ ತಿಳಿಸುವಂತೆ ‘ಸ್ನೇಹ ’ ಅಂದರೆ ಗೆಳೆತನ .
ವಿಭಿನ್ನ ವೃತ್ತಿಯಲ್ಲಿನ ಸಮಾನ ಮನಸ್ಕ ಗೆಳೆಯರ ಸೃಷ್ಟಿಯೇ ಈ ವಿದ್ಯಾಸಂಸ್ಥೆ .
ಇದರಲ್ಲಿ ವೈದ್ಯರು ,ಶಿಕ್ಷಕರು ,ಇಂಜಿನಿಯರರು ಹಾಗೂ ಉದ್ಯಮಿಗಳಿದ್ದಾರೆ .
ಪ್ರಸ್ತುತ ನಿವೃತ್ತ ಶಿಕ್ಷಕ ಡಾ |ಚಂದ್ರಶೇಖರ ದಾಮ್ಲೆಯವರು ಇದರ ಅಧ್ಯಕ್ಷರಾಗಿದ್ದು ವೈದ್ಯ ಡಾ |ವಿದ್ಯಾಶಾಂಭವ ಪಾರೆಯವರು ಇದರ ಸಂಚಾಲಕರಾಗಿದ್ದಾರೆ .
ನಿರ್ದೇಶಕರಾಗಿ ಭಾರತದ ಸೇತು ಬ್ರಹ್ಮ , ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್ , ಕಾಂಕೂಡ್ ಎಂಬ ಮರಕ್ಕೆ ಸಂವಾದಿಯಾಗಿರುವ ಕೃತಕ ವಸ್ತುವಿನ ಸೃಷ್ಟಿಕರ್ತ ಎಸ್ ಕೆ ಆನಂದ ಕುಮಾರ್ , ಉದ್ಯಮಿ ಶ್ರೀಕರ ದಾಮ್ಲೆ ಮೊದಲಾದವರಿದ್ದಾರೆ .
ಸಂಸ್ಥೆಯು ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಸತತ 7 ಬಾರಿ ಶೇಕಡಾ 100 ಫಲಿತಾಂಶ ಗಳಿಸುತ್ತಿದೆ .