ಭಾರತ ಸರ್ಕಾರದಿಂದ ನಿಯೋಜನೆಗೊಳ್ಳುವ ಈ ಆಯೋಗವು ಕಾಲಕ್ಕನುಗುಣವಾಗಿ ಸರ್ಕಾರಿ ಕೆಲಸಗಾರರ ವೇತನ ಸ್ವರೂಪ ಬದಲಾವಣೆಗೆ ಶಿಫಾರಸ್ಸು ಮಾಡಲೆಂದೇ ರಚಿತವಾಗಿರುತ್ತದೆ .
ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆವಿಗೂ ಏಳು ವೇತನ ಆಯೋಗಗಳನ್ನು ರಚಿಸಿ ಅವುಗಳಿಂದ ಸರ್ಕಾರಿ ಕೆಲಸಗಾರರ ವೇತನ ಕುರಿತಾಗಿ ಶಿಫಾರಸ್ಸು ಪಡೆಯಲಾಗಿದೆ .
ಸರ್ಕಾರದ ನಾಗರೀಕ ಸೇವಾ ವಲಯಗಳು ಹಾಗು ದೇಶದ ಸೇನಾ ವಿಭಾಗಗಳಿಗೆ ವೇತನ ಆಯೋಗದ ಶಿಫಾರಸ್ಸು ಬಹು ಮುಖ್ಯವಾಗಿರುತ್ತದೆ .
ವೇತನ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದ್ದು ಭಾರತ ಸರ್ಕಾರ ವೇತನ ಆಯೋಗವನ್ನು ರಚನೆ ಮಾಡುವ ಜವಾಬ್ದಾರಿ ಹಾಗು ಅಧಿಕಾರವನ್ನು ಹೊಂದಿದೆ .
ವೇತನ ಆಯೋಗ ಅಸ್ತಿತ್ವದಲ್ಲಿರುವ ಅವಧಿ ಕೇವಲ ಹದಿನೆಂಟು ತಿಂಗಳುಗಳು ಮಾತ್ರ .
ಆಯೋಗ ರಚನೆಯಾದಂದಿನಿಂದ ಹದಿನೆಂಟು ತಿಂಗಳುಗಳ ಒಳಗೆ ವೇತನ ಆಯೋಗವು ತನ್ನ ಸಂಪೂರ್ಣ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಬೇಕು .
ಭಾರತದಲ್ಲಿ ಮೊದಲ ಬಾರಿಗೆ ವೇತನ ಆಯೋಗವನ್ನು ೧೯೪೬ರ ಜನವರಿ ತಿಂಗಳಿನಲ್ಲಿ ರಚಿಸಲಾಯಿತು .
ಬ್ರಿಟೀಷ್ ಸರ್ಕಾರ ಚಾಲ್ತಿಯಲ್ಲಿದ್ದಾಗ ರಚಿತವಾದ ಆಯೋಗ ಇದಾಗಿದ್ದು ಅದರ ಶಿಫಾರಸ್ಸು ವರದಿಗಳನ್ನು ೧೯೪೭ ರ ಮೇ ತಿಂಗಳಿನಲ್ಲಿ ಅಂದರೆ ಸ್ವಾತಂತ್ರ್ಯ ಬರುವ ಕೆಲವೇ ತಿಂಗಳುಗಳ ಮೊದಲು ಭಾರತದ ಮಧ್ಯಂತರ ಸರ್ಕಾರಕ್ಕೆ ಸಲ್ಲಿಸಲಾಯಿತು .
ಆಗ ರಚಿತವಾಗಿದ್ದ ವೇತನ ಆಯೋಗಕ್ಕೆ ಛೇರ್ಮನ್ ಆಗಿದ್ದವರು ಶ್ರೀನಿವಾಸ ವರದಾಚಾರಿಯರ್ .
ಒಂಬತ್ತು ಸದಸ್ಯರನ್ನೊಳಗೊಂಡ ಮೊದಲ ವೇತನ ಆಯೋಗವನ್ನು ಬ್ರಿಟಿಷ್ ಸರ್ಕಾರ ನಾಗರೀಕ ಸೇವಾ ವಲಯಗಳಲ್ಲಿನ ಸರ್ಕಾರಿ ಕೆಲಸಗಾರರಿಗೆ ಕೊಡಮಾಡುವ ವೇತನ ಪರಿಷ್ಕರಿಸಲೆಂದೇ ರಚಿಸಲಾಗಿತ್ತು .
ಆರನೇ ವೇತನ ಆಯೋಗದ ವರದಿ .
ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಸುದ್ದಿ ತಾಣ.
ಏಳನೇ ವೇತನ ಆಯೋಗದ ಅಧೀಕೃತ ಜಾಲತಾಣ.
ಏಳನೇ ವೇತನ ಆಯೋಗದ ಇತ್ತೀಚಿನ ಸುದ್ದಿ ಮಾಹಿತಿ.
↑ " ಮೂರನೇ ವೇತನ ಆಯೋಗದ ಶಿಫಾರಸ್ಸು ಅಂಶಗಳು " ( ಪಿಡಿಎಫ್ ವರದಿ ) ( in ಆಂಗ್ಲ ) .
ನವ ದೆಹಲಿ .
೦೬ ಅಕ್ಟೋಬರ್ ೨೦೧೬ ರಂತೆ.CS1 maint : location ( link ) CS1 maint : unrecognized language ( link )