ಪೌರತ್ವ (ತಿದ್ದುಪಡಿ) ಮಸೂದೆ , ೨೦೧೯ , ೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು , ಬೌದ್ಧರು , ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ .
ಆ ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ, ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರು.
ಕೇಂದ್ರ ಸಚಿವ ಸಂಪುಟವು ೪ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಮುಂದಿಟ್ಟಿತು .
ಇದನ್ನು ಡಿಸೆಂಬರ್ ೧೦ ರಂದು ಲೋಕಸಭೆಯು ಅಂಗೀಕರಿಸಿತು ಹಾಗೂ ಡಿಸೆಂಬರ್ ೧೧ ರಂದು ರಾಜ್ಯಸಭೆಯು ಇದನ್ನು ಅಂಗೀಕಾರ ಮಾಡಿತು.
ಭಾರತೀಯ ಜನತಾ ಪಕ್ಷವು ಅಫ್ಘಾನಿಸ್ತಾನ , ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವುದಾಗಿ ಭರವಸೆಯನ್ನು ನೀಡಿತ್ತು.
೨೦೧೪ರಲ್ಲಿ ಬಿಜೆಪಿ ಪಕ್ಷವು, ಚುನಾವಣಾ ಪ್ರಣಾಳಿಕೆಯಲ್ಲಿ, ಹಿಂದೂ ನಿರಾಶ್ರಿತರನ್ನು ಸ್ವಾಗತಿಸಿ ಅವರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿತ್ತು .
ಪೌರತ್ವ (ತಿದ್ದುಪಡಿ )ಮಸೂದೆ ,೨೦೧೬ ನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು ಮತ್ತು ಅಂಗೀಕರಿಸಲಾಯಿತು .
ಆದರೆ ಈಶಾನ್ಯ ಭಾರತದಲ್ಲಿ ವ್ಯಾಪಕ ರಾಜಕೀಯ ವಿರೋಧ ಮತ್ತು ಪ್ರತಿಭಟನೆಗಳು ನಡೆದವು.
ಅವರ ಮುಖ್ಯ ಕಾಳಜಿ ಏನಾಗಿತ್ತೆಂದರೆ,ಬಾಂಗ್ಲಾದೇಶದಿಂದ ಜನರು ವಲಸೆ ಬಂದರೆ, ಈಶಾನ್ಯ ಭಾರತದ ಜನಸಂಖ್ಯಾಶಾಸ್ತ್ರವು ಬದಲಾಗುತ್ತದೆ .
ಹಾಗಾಗಿ, ಇದನ್ನು ಅನುಸರಿಸಿ, ಈಶಾನ್ಯ ಭಾರತದ ರಾಜ್ಯಗಳನ್ನು ಮಸೂದೆಯ ನಿಬಂಧನೆಗಳಿಂದ ಹೊರಗಿಟ್ಟು, ೨೦೧೯ ರ ಮಸೂದೆಯನ್ನು ಅಂಗೀಕರಿಸಲಾಯಿತು.
ಪೌರತ್ವ ಕಾಯ್ದೆ ೧೯೫೫ ರಲ್ಲಿ ತಿದ್ದುಪಡಿ ಮಾಡಲು,೨೦೧೬ ರ ಜನವರಿಯಲ್ಲಿ ಪೌರತ್ವ (ತಿದ್ದುಪಡಿ ) ಮಸೂದೆಯನ್ನು ಮಂಡಿಸಲಾಯಿತು .
ಈ ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ ೧೯, ೨೦೧೬ ರಂದು ಪೌರತ್ವ (ತಿದ್ದುಪಡಿ ) ಮಸೂದೆ , ೨೦೧೬ ಎಂದು ಪರಿಚಯಿಸಲಾಯಿತು .
ಬಳಿಕ ಇದನ್ನು ೧೨ ಆಗಸ್ಟ್ ೨೦೧೬ ರಂದು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು .
ಅದು ೭ ಜನವರಿ ೨೦೧೯ ರಂದು ತನ್ನ ವರದಿಯನ್ನು ಸಲ್ಲಿಸಿತು .
ಇದನ್ನು ಲೋಕಸಭೆಯು ೮ ಜನವರಿ ೨೦೧೯ ರಂದು ಅಂಗೀಕರಿಸಿತು .
ಆದರೆ,ಇದು ೧೬ ನೇ ಲೋಕಸಭಾ ವಿಸರ್ಜನೆಯೊಂದಿಗೆ ಕಳೆದುಹೋಯಿತು.
ತರುವಾಯ,ಕೇಂದ್ರ ಸಚಿವ ಸಂಪುಟ ೨೦೧೯ ರ ಪೌರತ್ವ (ತಿದ್ದುಪಡಿ ) ಮಸೂದೆಯನ್ನು ೨೦೧೯ರ ಡಿಸೆಂಬರ್ ೪ ರಂದು ಸಂಸತ್ತಿನಲ್ಲಿ ಪರಿಚಯಿಸಲು ತೆರವುಗೊಳಿಸಿತು .
ಈ ಮಸೂದೆಯನ್ನು ೧೭ನೇ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ೯ ಡಿಸೆಂಬರ್ ೨೦೧೯ ರಂದು ಪರಿಚಯಿಸಿದರು ಮತ್ತು ೨೦೧೯ ರ ಡಿಸೆಂಬರ್ ೧೦ ರಂದು ಬೆಳಿಗ್ಗೆ , ೩೧೧ ಸಂಸದರು ಪರವಾಗಿ ಮತ್ತು ೮೦ ಸಂಸದರು ಮಸೂದೆ ವಿರುದ್ಧ ಮತ ಚಲಾಯಿಸಿದರು.
ಇದನ್ನು ಡಿಸೆಂಬರ್ ೧೧ ರಂದು ರಾಜ್ಯಸಭೆಯು ಅಂಗೀಕರಿಸಿತು.
೨೦೧೪ ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ ,ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ ,ಸಿಖ್ಖ ,ಬೌದ್ಧ ,ಜೈನ ,ಪಾರ್ಸಿ ಮತ್ತು ಕ್ರಿಶ್ಚಿಯನ್ನ್ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು ೧೯೫೫ ರ ಪೌರತ್ವ ಕಾಯ್ದೆಗೆ ಮಸೂದೆ ತಿದ್ದುಪಡಿ ಮಾಡಿದೆ .
ಈ ಕಾಯಿದೆಯಡಿ, ನೈಸರ್ಗಿಕೀಕರಣದ ಮೂಲಕ ಪೌರತ್ವಕ್ಕಾಗಿ ಒಂದು ಅವಶ್ಯಕತೆಯೆಂದರೆ, ಅರ್ಜಿದಾರನು ಕಳೆದ 12 ತಿಂಗಳಿನಿಂದ ಭಾರತದಲ್ಲಿ ವಾಸಿಸುತ್ತಿರಬೇಕು .
ಅದಲ್ಲದೆ, ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿರಬೇಕು .
ಆದರೆ ಈ ತಿದ್ದುಪಡಿಯು , ಮೂರು ದೇಶಗಳ , ಆರು ಧರ್ಮಗಳಿಗೆ ಸೇರಿದ ವ್ಯಕ್ತಿಗಳಿಗೆ ಈ 11 ವರ್ಷದ ಅಗತ್ಯವನ್ನು ಐದು ವರ್ಷಗಳವರೆಗೆ ಸಡಿಲಿಸುತ್ತದೆ .
ಅದಲ್ಲದೆ , ಈ ಮಸೂದೆಯು ಅಸ್ಸಾಂ , ಮೇಘಾಲಯ , ಮಿಜೋರಾಂ , ಮತ್ತು ತ್ರಿಪುರದ ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿ ಸೇರಿಸಿದೆ .
ಈ ಬುಡಕಟ್ಟು ಪ್ರದೇಶಗಳಲ್ಲಿ ಅಸ್ಸಾಂನ ಕಾರ್ಬಿ ಆಂಗ್ಲಾಂಗ್ , ಮೇಘಾಲಯದ ಗಾರೊ ಹಿಲ್ಸ್ , ಮಿಜೋರಾಂನ ಚಕ್ಮಾ ಜಿಲ್ಲೆ ಮತ್ತು ತ್ರಿಪುರದ ಕೆಲ ಬುಡಕಟ್ಟು ಪ್ರದೇಶಗಳು ಸೇರಿವೆ .
ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಅನ್ನು ಒಳಗೊಂಡಿರುವ ಇನ್ನರ್ ಲೈನ್ ಪರ್ಮಿಟ್ ಮೂಲಕ ನಿಯಂತ್ರಿಸಲ್ಪಡುವ ಪ್ರದೇಶಗಳಿಗೆ ಈ ತಿದ್ದುಪಡಿಯಿಂದ ವಿನಾಯಿತಿ ನೀಡಿದೆ ಹಾಗೂ ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್‌ನಲ್ಲಿ ಸೇರ್ಪಡೆಗೊಳಿಸುವುದನ್ನು ೧೦ ಡಿಸೆಂಬರ್ ೨೦೧೯ ರಂದು ಘೋಷಿಸಲಾಗಿದೆ.
ಭಾರತದ ಸಾಗರೋತ್ತರ ಪೌರತ್ವ (ಓಸಿಐ ) ಹೊಂದಿರುವವರು ನೋಂದಣಿಯಾದ ಐದು ವರ್ಷಗಳಲ್ಲಿ , ಎರಡು ಅಥವಾ ಹೆಚ್ಚಿನ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದರೆ ಆಥವಾ ಅಗತ್ಯದ ಸಂದರ್ಭದಲ್ಲಿ ವಂಚನೆಯ ಮೂಲಕ ನೋಂದಣಿಯನ್ನು ಮಾಡಿಸಿದರೆ , ಭಾರತದ ಸಾರ್ವಭೌಮತ್ವದ ಹಿತದೃಷ್ಟಿಯಿಂದ , ಸಾಗರೋತ್ತರ ಪೌರತ್ವ ನೋಂದಣಿಯನ್ನು ರದ್ದುಗೊಳಿಸುವ ಹೊಸ ನಿಬಂಧನೆಗಳನ್ನು ಮಸೂದೆಯು ಒಳಗೊಂಡಿದೆ.
ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (ಯುಎಸ್ಸಿಐಆರ್ಎಫ್ ) ೯ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಅಂಗೀಕರಿಸಿದ ಬಗ್ಗೆ ಅಮಿತ್ ಶಾ ಮತ್ತು " ಇತರ ಪ್ರಮುಖ ನಾಯಕತ್ವ " ದ ವಿರುದ್ಧ ನಿರ್ಬಂಧಗಳನ್ನು ಕೋರಿತು.
ಇದನ್ನು ಅನುಸರಿಸಿ ಭಾರತ ವಿದೇಶಾಂಗ ಸಚಿವಾಲಯವು ಒಂದು ಹೇಳಿಕೆಯನ್ನು ನೀಡಿದೆ :
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಉದ್ದೇಶಿತ ಪೌರತ್ವ ಕಾನೂನನ್ನು ಟೀಕಿಸಿದರು ಮತ್ತು ಭಾರತವು , " ದ್ವಿಪಕ್ಷೀಯ ಒಪ್ಪಂದಗಳನ್ನು " ಉಲ್ಲಂಘಿಸಿದ್ದಾರೆ ಎಂದು ಹೇಳಿದರು.
೨೦೧೯ ರ ಜನವರಿಯಲ್ಲಿ , ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ ) ಸಂಸತ್ತಿನ ಜಂಟಿ ಸಮಿತಿಯೊಂದಕ್ಕೆ ,ಸಿಎಬಿಯ ಹಿಂದಿನ ಆವೃತ್ತಿಯೊಂದರಲ್ಲಿ " ಭಾರತವನ್ನು ಒಳನುಸುಳಲು ವಿದೇಶಿ ಏಜೆಂಟರು ಸಿಎಬಿ ಅನ್ನು ದುರುಪಯೋಗಪಡಿಸಿಕೊಳ್ಳಬಹುದು " (ಪಾಕಿಸ್ತಾನದ ಐಎಸ್‌ಐನಂತಹ ಸಂಸ್ಥೆಗಳಿಂದ ) ಮತ್ತು ಅದು " ಅವರು ಭಾರತಕ್ಕೆ ನುಸುಳಲು ಬಳಸಬಹುದಾದ ' ಕಾನೂನು ಚೌಕಟ್ಟು ' ಆಗಬಹುದು " ಎಂದಿತ್ತು.
ಮಸೂದೆಯು ಭಾರತದ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆಯೆ ಎಂದು ಪರಿಗಣಿಸಬೇಕಾದ ಪ್ರಮುಖ ವಿಷಯವೆಂದರೆ ಅಕ್ರಮ ವಲಸಿಗರಿಗೆ ಅವರ ಮೂಲ ದೇಶ , ಧರ್ಮ , ಭಾರತಕ್ಕೆ ಪ್ರವೇಶಿಸಿದ ದಿನಾಂಕ ಮತ್ತು ಭಾರತದಲ್ಲಿ ವಾಸಿಸುವ ಸ್ಥಳದ ಆಧಾರದ ಮೇಲೆ ಮಸೂದೆ ಭೇದಾತ್ಮಕ ಚಿಕಿತ್ಸೆಯನ್ನು ಒದಗಿಸುತ್ತದೆ (ವಿನಾಯಿತಿ ಪಡೆದ ಈಶಾನ್ಯ ಭಾರತ ಪ್ರದೇಶಗಳಿಗೆ ಸಂಬಂಧಿಸಿದಂತೆ ) .
ವಿಧಿ ೧೪ ನಾಗರಿಕರು ಮತ್ತು ವಿದೇಶಿಯರು ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ .
ಹಾಗೆ ಮಾಡುವ ತಾರ್ಕಿಕತೆಯು ಸಮಂಜಸವಾದ ಉದ್ದೇಶವನ್ನು ಪೂರೈಸಿದರೆ ಮಾತ್ರ ಜನರ ಗುಂಪುಗಳ ನಡುವೆ ವ್ಯತ್ಯಾಸವನ್ನು ತೋರಿಸಲು ಇದು ಕಾನೂನುಗಳು ಅನುಮತಿಸುತ್ತದೆ .
ಪರಿಗಣಿತ ಪ್ರಸ್ತಾವಿತ ಕಾನೂನಿನಲ್ಲಿ ಜನರ ಗುಂಪುಗಳ ವರ್ಗೀಕರಣವು " ಸಮಂಜಸವಾದ ವರ್ಗೀಕರಣ " ದ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ ಮತ್ತು ಇದರ ಪರಿಣಾಮವಾಗಿ 14 ನೇ ಪರಿಚ್ಛೇದದಿಂದ ವಿನಾಯಿತಿ ನೀಡಲಾಗುತ್ತದೆ :
ವರ್ಗೀಕರಣವು ಬುದ್ಧಿವಂತ ಭೇದವನ್ನು ಆಧರಿಸಿದೆ .
ಅದು ಗುಂಪಿನಿಂದ ಹೊರಗುಳಿದಿರುವ ಇತರರಿಂದ ಗುಂಪು ಮಾಡಲ್ಪಟ್ಟ ವ್ಯಕ್ತಿಗಳು ಅಥವಾ ವಸ್ತುಗಳನ್ನು ಪ್ರತ್ಯೇಕಿಸುತ್ತದೆ ಮತ್ತು ಭೇದಾತ್ಮಕತೆಯು ಕಾಯಿದೆಯ ಉದ್ದೇಶದೊಂದಿಗೆ ತರ್ಕಬದ್ಧ ಸಂಬಂಧವನ್ನು ಹೊಂದಿದೆ.
ಸಿಎಬಿನಲ್ಲಿನ ವಸ್ತುಗಳು ಮತ್ತು ಕಾರಣಗಳ ಹೇಳಿಕೆಯನ್ನು ಹೀಗೆ ಹೇಳುತ್ತದೆ :
ಆದ್ದರಿಂದ ಮಸೂದೆಯು ಧರ್ಮದ ಆಧಾರದ ಮೇಲೆ ಮತ್ತು /ಅಥವಾ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಎದುರಿಸುತ್ತಿರುವ ಸಮುದಾಯಗಳನ್ನು ರಕ್ಷಿಸಲು ಉದ್ದೇಶಿಸಿದೆ .
ಇದು ಅಫ್ಘಾನಿಸ್ತಾನ ,ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೂರು ದೇಶಗಳ ರಾಷ್ಟ್ರ ಧರ್ಮದ ಮಾನದಂಡಗಳನ್ನು ಬಳಸುತ್ತದೆ .
ವಜ್ರಯಾನ ಬೌದ್ಧಧರ್ಮವನ್ನು ರಾಜ್ಯ ಧರ್ಮವಾಗಿ ಹೊಂದಿರುವ ಭೂತಾನ್ ಅನ್ನು ಏಕೆ ಹೊರಗಿಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ; ಏಕೆಂದರೆ ಭೂತಾನ್‌ನಲ್ಲಿರುವ ಕ್ರೈಸ್ತರು ಖಾಸಗಿಯಾಗಿ ತಮ್ಮ ಮನೆಗಳ ಒಳಗೆ ಮಾತ್ರ ಪ್ರಾರ್ಥಿಸಬಹುದು.
ರಾಷ್ಟ್ರಧರ್ಮವನ್ನು ಹೊಂದಿರದ ಮ್ಯಾನ್ಮಾರ್‌ನಲ್ಲಿ , ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ವಿರುದ್ಧ ತಮ್ಮ ಧರ್ಮವನ್ನು ಆಚರಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಶ್ರೀಲಂಕಾದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತದೆ .
ಆದರೆ ಶ್ರೀಲಂಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ೨೦೧೮ ರ ಯುಎಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ,
ಇದರ ಪರಿಣಾಮವಾಗಿ , ಮ್ಯಾನ್ಮಾರ್‌ನ ರೋಹಿಂಗ್ಯಾಗಳಂತಹ ಸಮುದಾಯಗಳನ್ನು ಹೊರಗಿಡುವುದು ಜನಾಂಗ ಅಥವಾ ಜನಾಂಗದ ಆಧಾರದ ಮೇಲೆಯೇ ಹೊರತು ಧರ್ಮವೆಂದಲ್ಲ .
ಆದರೆ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅವರು ಎದುರಿಸುತ್ತಿರುವ ನಿರ್ಬಂಧಗಳು ಪ್ರಶ್ನಾರ್ಹವಾಗಿದೆ .
ಶ್ರೀಲಂಕಾದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಅಲ್ಪಸಂಖ್ಯಾತರಿಗೂ ಇದೇ ರೀತಿಯ ಪ್ರಶ್ನೆ ಉದ್ಭವಿಸುತ್ತದೆ .
ಅಂತಿಮವಾಗಿ , ಪಾಕಿಸ್ತಾನದಲ್ಲಿ ಅಹ್ಮದಿಯಾ ಮತ್ತು ಬಾಂಗ್ಲಾದೇಶದ ನಾಸ್ತಿಕರನ್ನು ಹೊರಗಿಡುವುದು ಸಹ ಪ್ರಶ್ನಾರ್ಹವಾಗಿದೆ .
ಇವುಗಳು ಸಂಬಂಧಿತ ವಿಷಯವಾದರೂ , ಈ ಮಸೂದೆಯ ವ್ಯಾಪ್ತಿಯಲ್ಲಿಲ್ಲ .
ಶ್ರೀಲಂಕಾದಲ್ಲಿ ಹಿಂದುಗಳು ಅಲ್ಪಸಂಖ್ಯಾತ ಧರ್ಮವಾದವರಾದರೂ ,ಜನಾಂಗೀಯತೆಯ ಆಧಾರದ ಮೇಲೆ ಕಿರುಕುಳವನ್ನು ಅನುಭವಿಸಿರುವ ಶ್ರೀಲಂಕಾದ ತಮಿಳರು ಭಾರತದತ್ತ ವಲಸೆ ಬರುತ್ತಿರುವುದು ಪ್ರಶ್ನಾರ್ಹವಾಗಿದೆ .
" ಶ್ರೀಮಂತ ಮತ್ತು ವ್ಯಾಪಕವಾದ ಚರ್ಚೆಯ ನಂತರ ಲೋಕಸಭೆ ೨೦೧೯ ರ ಪೌರತ್ವ ( ತಿದ್ದುಪಡಿ ) ಮಸೂದೆಯನ್ನು ಅಂಗೀಕರಿಸಿದೆ ಎಂದು ಖುಷಿಪಟ್ಟಿದ್ದೇನೆ " ಮತ್ತು " ಮಸೂದೆ ಭಾರತದ ಶತಮಾನಗಳ ಹಳೆಯ ಒಗ್ಗೂಡಿಸುವಿಕೆ ಮತ್ತು ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿದೆ " ಎಂದು ಪ್ರಧಾನಿ ಮೋದಿ ಹೇಳಿದರು.
ಲೋಕಸಭೆಯಲ್ಲಿ ಈಶಾನ್ಯ ರಾಜ್ಯಗಳ ಬಹುಪಾಲು ಸದಸ್ಯರು ಮಸೂದೆಯನ್ನು ಬೆಂಬಲಿಸಿದ ಕಾರಣ ಮಸೂದೆಯನ್ನು ಅವರೂ ಬೆಂಬಲಿಸಿದರು.
ಈ ಮಸೂದೆಗೆ ಭಾರತದೇಶದ ಅನೇಕ ಕಡೆ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ .
ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಹೆಚ್ಚು ವಿರೋದವಿದ್ದು ವ್ಯಾಪಕವಾಗಿದೆ .
ಪಶ್ಚಿಮ ಬಂಗಾಳದಲ್ಲಿಯೂ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧಕ್ಕೆ ಅದರ ಹಿಂದಿನ ಇತಿಹಾಸದ ಕಾರಣಗಳಿವೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿವಸೇನಾ ಸಂಸದ ಸಂಜಯ್ ರಾವುತ್ , ಅಮೆರಿಕ ನಾಯಕ ಮಾರ್ಟಿನ್ ಲೂಥರ್ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಹೀಗೆ ಟೀಕಿಸಿದರು .
ಎಲ್ಲಿ ಧಾರ್ಮಿಕ ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸಲಾಗುತ್ತದೆಯೊ ಆ ದೇಶ ಉತ್ತಮ ಎನಿಸಿಕೊಳ್ಳುತ್ತದೆ .
ಆದರೆ,ಎಲ್ಲಿ ರಾಜಕೀಯವೇ ಧಾರ್ಮಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೊ , ಅಂತಹ ಕಡೆ ಅನರ್ಹರ ಹಿಡಿತದಲ್ಲಿ ದೇಶ ಸಾಗುತ್ತಿದೆ ಎಂದು ನಾವೆಲ್ಲ ತಿಳಿಯಬೇಕು ’ ಎಂದು ಮಾರ್ಟಿನ್ ಲೂಥರ್ ಹೇಳಿದ್ದರು .
ಅವರ ಮಾತುಗಳನ್ನು ಉಲ್ಲೇಖಿಸಿ ರಾವುತ್ ಟ್ವೀಟ್ ಮಾಡಿದ್ದಾರೆ .
ಆದರೆ ಏಕೆ ಮತ್ತು ಯಾವ ವಿಷಯದ ಕುರಿತು ಎನ್ನುವುದನ್ನು ನಿರ್ಧಿಷ್ಟವಾಗಿ ತಿಳಿಸಿಲ್ಲ .
ಸಿಎಎ , ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಿಲ್ಲ , ಧಾರ್ಮಿಕ ಕಿರುಕುಳಕ್ಕೊಳಗಾದ ಸಂತ್ರಸ್ತತೆಯ ಆಧಾರದಲ್ಲಿ ಪೌರತ್ವ ನೀಡುತ್ತದೆ ;
ಆದಕಾರಣ ಇಲ್ಲಿ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಅಂತ ಸರ್ಕಾರ ಹೇಳುತ್ತಿದೆ .
ಆದರೆ ಕಾಯ್ದೆಯಲ್ಲಿ ಎಲ್ಲೂ ‘ ಧಾರ್ಮಿಕ ಕಿರುಕುಳಕ್ಕೊಳಗಾದ ’ ಆಧಾರದ ಮೇಲೆ ವಲಸೆಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಲಾಗುವುದು ಎಂದು ಹೇಳಿಲ್ಲ .
ಅದರಲ್ಲಿ ಪಾಕಿಸ್ತಾನ ,ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಬಂದ ಹಿಂದೂ , ಬೌದ್ಧ , ಜೈನ , ಪಾರ್ಸಿ , ಸಿಖ್ ಮತ್ತು ಕ್ರೈಸ್ತ ಅಕ್ರಮವಾಸಿಗಳಿಗೆ ಆದ್ಯತೆಯ ಮೇಲೆ ಪೌರತ್ವ ನೀಡಲಾಗುವುದು ಎಂದು ಹೇಳಿದೆ .
ಇದರ ಬದಲಿಗೆ " ಆ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಬಂದವರಿಗೆ " ಎಂದು ಸ್ಪಷ್ಟವಾಗಿ ಹೇಳಿದ್ದರೆ ಮತ್ತು ಆ ಕಾರಣಕ್ಕೋಸ್ಕರ ಬಹಳಷ್ಟು ಮುಸ್ಲಿಮರು ಈ ಕಾಯ್ದೆಯಡಿ ಅನುಕೂಲ ಪಡೆಯಲು ಅನರ್ಹರಾಗಿದ್ದರೆ , ಆಗ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಬರುತ್ತಿರಲಿಲ್ಲ .
ಇಡೀ ಪ್ರಕ್ರಿಯೆಯಲ್ಲಿ ದೇಶವಾಸಿಗಳೂ ಅಕ್ರಮವಾಸಿಗಳೆಂದು ಪರಿಗಣಿಸಲ್ಪಟ್ಟು ಇಂತಹ ಬಂಧನಗೃಹ ಕೇಂದ್ರ ಸೇರುವ ಅಪಾಯವೂ ಇದೆ ಎನ್ನುವ ಅಂಶವನ್ನು ಅಸ್ಸಾಂನಲ್ಲಿ ನಡೆದ ಎನ್ಆರ್‌ಸಿ ತೋರಿಸಿಕೊಟ್ಟಿದೆ.
ಎಲ್ಲ ಶ್ರೀಮಂತ ದೇಶಗಳಲ್ಲೂ ಅಕ್ರಮವಾಗಿ ನೆಲೆಸಿದ ಲಕ್ಷಲಕ್ಷ ಭಾರತೀಯರಿದ್ದಾರೆ ‘ ನ್ಯೂಯಾರ್ಕ್ ಟೈಮ್ಸ್ ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ( 2019,ಡಿ .1 ),2010 - 17ರ ನಡುವೆ ಅಮೆರಿಕವೊಂದರಲ್ಲೇ ಅಕ್ರಮವಾಗಿ ಉಳಿದುಕೊಂಡಿರುವವರಲ್ಲಿ ಅತೀ ಹೆಚ್ಚಿರುವುದು ಭಾರತೀಯರು ( 3.30 ಲಕ್ಷ ) .
ಎಲ್ಲ ದೇಶಗಳೂ ಅಕ್ರಮವಾಸಿಗಳ ಬಗ್ಗೆ ಕ್ರೂರ ತೀರ್ಮಾನವೊಂದನ್ನು ಕೈಗೊಂಡದ್ದೇ ಆದರೆ , ಅದಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೆ ಬಲಿಯಾಗಲಿರುವವರು ಭಾರತದ ಹಿಂದೂಗಳೇ ಆಗಬಹುದು.
ಸಿಎಎ ಬಗ್ಗೆ ಈಗಲೂ ಒಂದು ವರ್ಗದ ಜನರಿಗೆ ವಿರೋಧ ಇಲ್ಲ ,ಸಿಎಎ ಜೊತೆ ಎನ್‌ಆರ್‌ಸಿ ((National Register of Citizens)) ಜೋಡಿಸುವುದಕ್ಕೆ ವಿರೋಧ ಇದೆ .
ಎನ್‌ಪಿಆರ್ ಬಗ್ಗೆ ಅಲ್ಲ , ಎನ್‌ಪಿಆರ್‌ನ ಪ್ರಶ್ನಾವಳಿಗೆ ಸೇರಿಸಿರುವ ಹೊಸ ಪ್ರಶ್ನೆಗಳ ಬಗ್ಗೆ ವಿರೋಧ ಇದೆ (ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ( ಎನ್‌ಪಿಆರ್ ) ) .
ಮುಖ್ಯವಾಗಿ ಭಾರತದಲ್ಲಿ ತಾವು ಭಾರತೀಯರು ಎಂದು ತೋರಿಸಲು ದಾಖಲೆ ಇಲ್ಲದ ಕೋಟಿ ಕೋಟಿ ದಲಿತರು ಹಿಂದುಳಿದವರು ಮೂಲನಿವಾಸಿಗಳು ಇದ್ದಾರೆ .
ಇವರನ್ನೆಲ್ಲಾ ಅವರ ಸಂಸಾರದಿಂದ ಬೇರ್ಪಡಿಸಿ ಬಂಧನಗೃಹದಲ್ಲಿ ಸಾಯುವ ತನಕ ಕೂಡಿಹಾಕುವುದು ಎಷ್ಟು ಸರಿ .
ಈ ಕ್ರೂರತೆಗೆ ಸರಿಸಮಾನ ಉಂಟೆ ?
ಇದು ಯೋಚಿಸಬೇಕಾದ ಪ್ರಶ್ನೆ .
ಷಾ ಹೇಳಿದಂತೆ ವಿದೇಶೀಯರೆಂದು ಅವರನ್ನೆಲ್ಲಾ ಸಮುದ್ರಕ್ಕೆ ಎಸೆಯುವುದು ಅಥವಾ ಬೇರೆ ದೇಶಕ್ಕೆ ಕಳಿಸುವುದು ಸಾಧ್ಯವೇ ?
ಆರ್ಥಿಕ ಸಂಕ್ಷಷ್ಟ ಇರುವಾಗ ಬಂಧನಗೃಹದಲ್ಲಿ ಸಾಯುವ ತನಕ ಅವರಯೋಗಕ್ಷೇಮದ ವೆಚ್ಚಕ್ಕಾಗಿ ೪೦ - ೫೦ ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯ ಮಾಡುವುದು ಪ್ರಯೋಜನಕಾರಿಯಾಗಬಹುದೆ ಎನ್ನುವುದು ಮುಖ್ಯ ಸಮಸ್ಯೆ .
ಉದಾಹರಣೆ : ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಹಿಂದೆಯೂ ಇತ್ತೆಂದು ಸರ್ಕಾರದವರು ವಾದ ಮಾಡುತ್ತಾರೆ .
ಆದರೆ 2010ರಲ್ಲಿ ಇದ್ದ ನೋಂದಣಿಗೂ ಈಗಿನದಕ್ಕೂ ಬಹಳ ವ್ಯತ್ಯಾಸವಿದೆ .
ನಿಮ್ಮ ಜನ್ಮದಾಖಲೆಯ ಜೊತೆಗೆ ನಿಮ್ಮ ತಂದೆ ,ತಾಯಿಯ ಜನ್ಮದಾಖಲೆ,ಅವರು ಯಾವ ಊರಲ್ಲಿ ಹುಟ್ಟಿದವರು ಎನ್ನುವ ದಾಖಲೆಗಳನ್ನೂ ತೋರಿಸಬೇಕು .
ಆ ಬಗೆಯ ದಾಖಲೆ ಸಿಗದವರು ಕೋಟ್ಯಂತರ ಜನ ಇದ್ದಾರೆ .
ಸ್ವತಃ ತಮ್ಮ ದಾಖಲೆ ಸಿಗುವುದೇ ದುರ್ಲಭವಿರುವ,ಗಂಡ ಬಿಟ್ಟ,ಅನಕ್ಷರಸ್ತ ರೇಣುಕಾಳಂಥ ಕೋಟ್ಯಂತರ ಮಹಿಳೆಯರು, ಅವರ ತಂದೆ ತಾಯಿಯ ಹುಟ್ಟಿದೂರಿಗೆ ಹೋಗಿ ದಾಖಲೆಗಳನ್ನು ತರಲು ಪ್ರಯತ್ನ ಆರಂಭಿಸಿದ್ದಾರೆ .
ಸಿಗದೆ ಇದ್ದಾಗ ಏನು ಮಾಡಬೇಕು ?
ಅವಳನ್ನು ಬಾಂಗ್ಲಾ ಎಂದು ಬಂಧನಗೃಹಕ್ಕೆ ನೂಕಬೇಕಾಗಬಹುದು.
ಸಮಸ್ಯೆ :ಕೊಪ್ಪಳದ ಕಾರ್ಮಿಕ ಕಾರಣ್ಣ ಅವರ ಅಳಲು -‘ಅನ್ನ ಅರಸಿ ಬೆಂಗಳೂರಿಗೆ ಬಂದಿದ್ದ ,ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಉಳಿದುಕೊಂಡಿದ್ದವನನ್ನು,ಬಾಂಗ್ಲಾದೇಶದ ಪ್ರಜೆ ಎಂಬ ಪಟ್ಟ ಕಟ್ಟಿ ಅವನ ಜೋಪಡಿಯನ್ನೇ ನೆಲಸಮ ಮಾಡಲಾಗಿದೆ.
ಅವನ ಬದುಕು ಬೀದಿಗೆ ಬಂದಿದೆ .
ಹಾಗೆಯೇ ಅಲ್ಲಿ ಸುಮಾರು ೩೦೦ ಭಾರತೀಯ ಕಾರ್ಮಿಕರ ಗುಡಿಸಲುಗಳನ್ನು ನೆಲಸಮಅ ಮಾಡಿದರು ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು,ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿದ್ದ ಸ್ಥಳೀಯ ಕಾರ್ಮಿಕರ ಜೋಪಡಿಗಳನ್ನು 19 ಜನವರಿ 2020 ರಂದು ಏಕಾಏಕಿ ನೆಲಸಮ ಮಾಡಿದರು .
ಅವರ ಬದುಕು ಬೀದಿಗೆ ಬಂದಿದೆ .
ಪಶ್ಚಿಮ ಅಸ್ಸಾಂನ ತಮುಲ್ಪುರದ ಪ್ರಾಥಮಿಕ ಶಾಲಾ ಶಿಕ್ಷಕ 30 ವರ್ಷದ ಗೋಬಿಂದ ನಂದಿ ," ನಾವು ಇಲ್ಲಿ ಜನಿಸಿದ್ದೇವೆ " ಎಂದುಹೇಳಿದರು .
ಕಳೆದ ವರ್ಷ ಬಿಡುಗಡೆಯಾದ ಕರಡು ಪಟ್ಟಿಯು ಅಂದಾಜು 4 ಮಿಲಿಯನ್ (೪೦ ಲಕ್ಷ )ಜನರ ಹೆಸರನ್ನು ರಿಜಿಸ್ಟರ್‌ನಿಂದ ಹೊರಹಾಕಿದೆ .
ಈ ಯೋಜನೆಯಲ್ಲಿ 4 ಮಿಲಿಯನ್ ಭಾರತೀಯರು ಪೌರತ್ವವನ್ನು ಕಳೆದುಕೊಳ್ಳುವ ಅಪಾಯವನ್ನುಂಟುಮಾಡುತ್ತದೆ ,ಎಂದರು .
1971 ರಲ್ಲಿ ರಕ್ತಸಿಕ್ತ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ರಾಜ್ಯಕ್ಕೆ ಗಡಿಯನ್ನು ದಾಟಿದ ನಂತರ ಅಸ್ಸಾಂನ ಅನೇಕ ಅಲ್ಪಸಂಖ್ಯಾತ ಬಂಗಾಳಿ ಸಮುದಾಯಗಳು ಭಾರತದಲ್ಲಿ ದಶಕಗಳಿಂದ ವಾಸಿಸುತ್ತಿವೆ .
ಇನ್ನೂ ಅನೇಕರು ತಮ್ಮ ಇತಿಹಾಸವನ್ನು ಇನ್ನೂ ಹಿಂದಕ್ಕೆ ಕಂಡುಹಿಡಿಯಬಹುದು,1947 ರಲ್ಲಿ ಭಾರತದ ಸ್ವಾತಂತ್ರ್ಯದ ಮೊದಲು ಆಗಮಿಸಿದರು .
" ಪಟ್ಟಿ ಪ್ರಕಟವಾದ ನಂತರ ಏನಾಗಲಿದೆ ಎಂದು ಯಾರಿಗೂ ನಿಜವಾಗಿಯೂ ತಿಳಿದಿಲ್ಲ "ಎಂದು ಶ್ರೇಯಾ ಮುನೊತ್ ಹೇಳಿದರು .
ಭಾರತದ ಈಶಾನ್ಯ ಅಸ್ಸಾಂನಲ್ಲಿ ಸುಮಾರು 2 ಮಿಲಿಯನ್ (20ಲಕ್ಷ ) ಜನರು ಈ ವಾರಾಂತ್ಯದಲ್ಲಿ ರಾಜ್ಯದ ಭಾರತೀಯ ನಾಗರಿಕರ ಪಟ್ಟಿಯಿಂದ ಹೊರಗುಳಿದಿದ್ದಾರೆ .
ಪ್ರಕಟವಾದ ,ವಿವಾದಾತ್ಮಕ ಹೊಸ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ )-ರಾಜ್ಯದ 33 ದಶಲಕ್ಷದಷ್ಟು ಜನಸಂಖ್ಯೆಯ 1.9 ದಶಲಕ್ಷವನ್ನು ಹೊರಗಿಟ್ಟಿದೆ.