ಕನ್ನಡ ಪುಸ್ತಕ ಪ್ರಾಧಿಕಾರವು ಅಪರೂಪದ ಹಾಗೂ ಶಾಸ್ತ್ರಸಂಬಂಧ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ವಿವಿಧ ಮಾಲಿಕೆಯಡಿ ಬೇರೆ ಪ್ರಕಾಶಕರು ಅಷ್ಟಾಗಿ.
ಪ್ರಕಟಿಸದ ಪುಸ್ತಕಗಳು ಜನಸಾಮಾನ್ಯರಿಗೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಪ್ರಕಟಿಸುತ್ತಾ ಬಂದಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಭಾಷೆ ಸಾಹಿತ್ಯಿಕವಾಗಿ ಪ್ರೌಢಾವಸ್ತೆಯನ್ನು ತಲುಪಿರುವುದರಲ್ಲಿ ಸಂಶಯವಿಲ್ಲ.
ಸಮಾಜ ಈ ಒಂದು ಶತಮಾನದಿಂದ ಬಹಳ ಶೀಘ್ರಗತಿಯಲ್ಲಿ ಮುಂದುರೆಯುತ್ತಿದ್ದುಆ ವೇಗಕ್ಕೆ ತಕ್ಕಾಗಿ ಕನ್ನಡ ಭಾಷೆಯೂ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೊಸತನ್ನು ತನ್ನಲ್ಲಿ ಅರಗಿಸಿಕೊಳ್ಳುವುದು ಅನಿವಾರ್ಯ.
ವೈದ್ಯಕೀಯ,ಇಂಜಿನಿಯರಿಂಗ್, ವಿಜ್ಞಾನ ಲೋಕಗಳ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತಿದ್ದರೂ ಈಗಿನ ಕಾಲ ವೇಗಕ್ಕೆ ತಕ್ಕಷ್ಟು ಕನ್ನಡದಲ್ಲಿ ಈ ವಿಭಾಗಗಳಲ್ಲಿ ಪುಸ್ತಕಗಳು ಹೊರಬರುತ್ತಿಲ್ಲ.
ಬಂದಂತಹ ಪುಸ್ತಕಗಳೂ ಕೂಡಾ ಜನಸಾಮಾನ್ಯರಿಗೆ_ ಎಟಕುವ ದರದಲ್ಲಿ ಲಭ್ಯವಾಗುತ್ತಿಲ್ಲ.
ಈ ಕೊರತೆಯನ್ನು ತುಂಬಬೇಕೆಂಬ ಸದಾಶಯದಿಂದ ಕೆಲ ಮಾಲೆಗಳಲ್ಲಿ ಪುಸ್ತಕಗಳನ್ನು ಹೊರತರುವ ಪ್ರಯತ್ನವನ್ನುಮಾಡಿದ್ದೇವೆ.
ಈ ದಿಶೆಯಲ್ಲಿ ಪ್ರಾಧಿಕಾರವು ಹಮ್ಮಿಕೊಂಡಿರುವ ಮಹತ್ವದ ಯೋಜನೆಗಳಲ್ಲಿ ವೈದ್ಯಕೀಯ ವಿಜ್ಞಾನ ಸಾಹಿತ್ಯದ ಮಾಲೆಯೂ ಒಂದು.
ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚು ಗ್ರಂಥಗಳು ಲಭ್ಯವಿಲ್ಲದೆ ಇರುವುದನ್ನು ಗಮನಿಸಿದ ಪ್ರಾಧಿಕಾರ ಈ ಮಾಲೆಯನ್ನು ಆರಂಭಿಸಬೇಕೆಂದು ಒಂದು ಸಂಪಾದಕಮಂಡಳಿಯನ್ನು ನೇಮಿಸಿತು.
ಈ ಸಂಪಾದಕ ಮಂಡಳಿಯಲ್ಲಿ ಸಂಪಾದಕರಾಗಿರಲು ನಾಡಿನ ಹಿರಿಯ ವೈದ್ಯರಾದ ಡಾ| ಸಿ. ಆರ್. ಚಂದ್ರಶೇಖರ್ ಅವರು ಒಪ್ಪಿರುತ್ತಾರೆ.
ಮಂಡಳಿಯ ಸದಸ್ಯರಾಗಿ ಹಿರಿಯ ವೈದ್ಯರುಗಳಾದ ಡಾ|ನಾ.ಸೋಮೇಶ್ವರ,ಡಾ| ವಸಂತ ಕುಲಕರ್ಣಿ, ಡಾ| ಪದ್ಮಿನಿ ಪ್ರಸಾದ್, ಡಾ।ವಸುಂಧರಾ ಭೂಪತಿ,ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ| ಕೆ. ಪಿ. ಪುತ್ತೂರಾಯ ಅವರುಗಳು ಈ ಕಾರ್ಯವನ್ನು ಸುಲಲಿತವಾಗಿ ನೆರವೇರಿಸಿಕೊಟ್ಟಿದ್ದಾರೆ.
ಇವೆರೆಲ್ಲರಿಗೂ ನನ್ನ ಕೃತಜ್ವತೆಗಳು.
ಈ ಮಾಲಿಕೆಯಲ್ಲಿ ಸಾಂಕ್ರಾಮಿಕ ರೋಗಗಳು ನಿಯಂತ್ರಣ ಮತ್ತು ತಡೆಗಟ್ಟುವಿಕೆಕೃತಿಯನ್ನು ರಚಿಸಿಕೊಡಲು ಒಪ್ಪಿ ಹಸ್ತಪ್ರತಿಯನ್ನು ನೀಡಿ ಸಹಕರಿಸಿದ ಡಾ. ಎನ್. ವಿಶ್ವರೂಪಾಚಾರ್ ಅವರಿಗೆ ಆಭಾರಿಯಾಗಿದ್ದೇವೆ.
ಈ ಮಾಲೆಯ ಪುಸ್ತಕಗಳನ್ನು ಹೊರತರುವಲ್ಲಿ ಪ್ರಾರಂಭದಿಂದ ವಿಶೇಷ ಆಸಕ್ತಿ ವಹಿಸಿದ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಶ್ರೀ ಅಶೋಕ ಎನ್ .ಚಲವಾದಿ, ನನ್ನ ಆಪ್ತ ಕಾರ್ಯದರ್ಶಿ ಶ್ರೀ ಕೆ. ಮುಕುಂದನ್, ಪ್ರಾಧಿಕಾರದ ಎಲ್ಲಾಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇನೆ.
ಈ ಮಾಲೆಯಎಲ್ಲಾ ಕೃತಿಗಳನ್ನು ಕನ್ನಡ ವಾಚಕರು ತುಂಬು ಹೃದಯದಿಂದ ಸ್ವಾಗತಿಸುತ್ತಾರೆಂದು ಆಶಿಸುತ್ತೇನೆ.
ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಎಲ್ಲರಿಗೆ ಹರಡುವ ರೋಗಗಳನ್ನು ಸಾಂಕ್ರಾಮಿಕ ರೋಗಗಳೆನ್ನುತ್ತಾರೆ.
ಕೆಲವು ರೋಗಾಣುಗಳು ಗಾಳಿ, ನೀರು ಆಹಾರ ಮಣ್ಣಿನ ಮೂಲಕ ಹರಡುತ್ತವೆ.
ಅತಿ ಸಾಮಾನ್ಯ ಸಾಂಕ್ರಾಮಿಕ ರೋಗಗಳೆಂದರೆ ಕಾಲರಾ, ಫ್ಲೇಗ್, ಸಿಡುಬು,ಕ್ಷಯ, ಕುಷ್ಟ, ಟೈಫಾಯಿಡ್ ಜ್ವರ, ನಾಯಿಕೆಮ್ಮು ದಡಾರ, ಫ್ಲೂ,ಡೆಂಗೂ,ಚಿಕುನ್ಗುನ್ಯಾ, ಪೊಲೀಯೋ, ಜಾಂಡೀಸ್, ಮಿದುಳ ಜ್ವರ, ಆಮಶಂಕೆ, ಫೈಲೇರಿಯಾ,ಮಲೇರಿಯಾ, ಸಿಫಿಲಿಸ್ ಗೊನೋರಿಯಾ, ಏಡ್ಸ್ ರೋಗ, ಹೊಟ್ಟೆಯಲ್ಲಿ ಹುಳ,ಹೇನು, ಕೂರೆ, ಕಜ್ಜಿ.
ಪಟ್ಟಿ ದೊಡ್ಡದೇ.
ಹಿಂದೆ ಕಾಲರಾ, ಫ್ಲೇಗ್, ಸಿಡುಬು, ಫ್ಲೂ, ಟೈಫಾಯಿಡ್ಗಳು ಸಾವಿರಾರುಜನರ ಪ್ರಾಣಗಳನ್ನು ಹರಣಮಾಡುತ್ತಿದ್ದವು.
ಹಳ್ಳಿಹಳ್ಳಿಗಳೇ ನಿರ್ಜನವಾಗುತ್ತಿದ್ದವು.
ಹೀಗಾಗಿ ಈ ಸಾಂಕ್ರಾಮಿಕ ರೋಗಗಳನ್ನು "ಮಹಾಮಾರಿ ಕಾಯಿಲೆ”ಗಳೆಂದು ಕರೆಯುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಈ ಬೃಹತ್ ಪ್ರಮಾಣದ ಸಾಂಕ್ರಾಮಿಕಗಳಿಲ್ಲ.
ಆದರೂ ಇತ್ತೀಚೆಗೆ ಚಿಕುನ್ಗುನ್ಯಾ, ಡೆಂಗ್ಯೂ, ಎಚ್೧ಎನ್೧ ಸೋಂಕುಕ್ಷಿಪ್ರಗತಿಯಲ್ಲಿ, ಅತ್ಯಲ್ಪಗತಿಯಲ್ಲಿ, ಅತ್ಯಲ್ಪಕಾಲದಲ್ಲಿ ಪ್ರಪಂಚದಲ್ಲಿ ಹರಡಿರುವುದನ್ನುನೋಡಿದ್ದೇವೆ.
ವೇಗದ ವಾಹನಗಳು ಲಭ್ಯವಿರುವ ಈ ಕಾಲದಲ್ಲಿ ಹೆಚ್ಚು ಜನದೇಶದೊಳಗೆ ಮತ್ತು ದೇಶದಿಂದ ದೇಶಕ್ಕೆ ಪ್ರಯಾಣಿಸುವುದರಿಂದ ಅನೇಕ ರೋಗಗಳುಬಹು ಬೇಗ ಹರಡುವಂತಾಗಿದೆ.
ಲಕ್ಷಾಂತರ ಜನ ಸೇರುವ ಕುಂಭಮೇಳಗಳು,ರಥೋತ್ಸವಗಳು, ಧಾರ್ಮಿಕ ಚಟುವಟಿಕೆಗಳು, ಪುಣ್ಯಕ್ಷೇತ್ರಗಳು ಸಾಂಕ್ರಾಮಿಕರೋಗಗಳನ್ನು ಹರಡುವುದರಲ್ಲಿ ಪಾಲ್ಗೊಳ್ಳುತ್ತವೆ.
ಆಗ ನಾವೆಲ್ಲ ಎಷ್ಟು ಎಚ್ಚರವಾಗಿದ್ದರೆ ಅಷ್ಟು ಒಳ್ಳೆಯದು.
ಸ್ವಚ್ಛತೆ, ನೈರ್ಮಲ್ಯತೆಯ ಅಭಾವ;
ನಾವು ಸೇವಿಸುವ ನೀರು, ಗಾಳಿ,ಆಹಾರ ಮಲಿನಗೊಳ್ಳುವುದು.
ರೋಗಿಯ ಸಂಪರ್ಕಕ್ಕೆ ಬರುವುದು, ರೋಗಿಯ ಎಂಜಲು, ಮೂಗಿನ ಸ್ರಾವ, ಮಲಮೂತ್ರಗಳ ಸಂಪರ್ಕ.
ಮನೆಯೊಳಕ್ಕೆ ಪ್ರಾಣಿಗಳು,ಕೀಟಗಳು ಬರಲು ಬಿಡುವುದು, ನೊಣ-ಸೊಳ್ಳೆ-ಜಿರಳೆ, ಇಲಿ ಹೆಗ್ಗಣಗಳು ಹೆಚ್ಚುವಂತೆಮಾಡುವುದು, ನಿತ್ಯ ಸ್ನಾನ ಮಾಡದಿರುವುದು, ಉಡುಗೆ 'ತೊಡುಗೆಗೆಗಳನ್ನು ಸ್ವಚ್ಚವಾಗಿಡದಿರುವುದು, ಕೊಳಕು ಪರಿಸರ, ಸೋಂಕು ರೋಗಗಳು ಹರಡಿ ಅದು ಸಾಂಕ್ರಾಮಿಕ ರೋಗಗಳಾಗಲು ನಾವೇ ಕಾರಣರಾಗುತ್ತೇವೆ.
ಸ್ವಚ್ಛಂದ ಲೈಂಗಿಕ ಸಂಪರ್ಕದಿಂದ ಲೈಂಗಿಕ ರೋಗಗಳು ಎಲ್ಲೆಡೆ ಹರಡುತ್ತೇವೆ.
ಇವೆಲ್ಲ ತಪ್ಪಬೇಕಾದರೆ, ವೈಯಕ್ತಿಕ ಸ್ವಚ್ಛತೆ, ಮನೆ, ಬೀದಿ, ಊರು ಮತ್ತು ಪರಿಸರ ನೈರ್ಮಲ್ಯವನ್ನು ನಾವೆಲ್ಲ ಕಾಪಾಡಲೇಬೇಕು.
ಸೋಂಕು ರೋಗಿಗಳನ್ನು ಪ್ರತ್ಯೇಕಿಸಿ,ಅವರಿಂದ ರೋಗ ಇತರರಿಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು.
ಸ್ವಚ್ಛತೆಯೇ ದೈವತ್ವ ಎಂಬ ನಾಣ್ಮುಡಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಶ್ರೀ ಎನ್.ವಿಶ್ವರೂಪಾಚಾರ್ರವರು ವೃತ್ತಿಯಿಂದ ಆರೋಗ್ಯ ಶಿಕ್ಷಕರು.
ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭೋದಕರಾಗಿ ಸೇವೆಸಲ್ಲಿಸಿ ನಿವೃತ್ತರಾದವರು.
ಆರೋಗ್ಯ ಶಿಕ್ಷಣ ಅವರ ಉಸಿರು.
ಕನ್ನಡದಲ್ಲಿ ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಒಂದು ನೂರಕ್ಕೂ ಹೆಚ್ಚಿನ ಪುಸ್ತಕಗಳನ್ನೂ ಬರೆದ ಮೂವರಲ್ಲಿ ಒಬ್ಬರು (ಇನ್ನಿಬ್ಬರು : ಡಾ|| ಪಿ. ಎಸ್. ಶಂಕರ್ ಮತ್ತು ಡಾ|ಸಿ.
ಆರ್. ಚಂದ್ರಶೇಖರ್)
ಉಪನ್ಯಾಸಗಳು, ಸಂವಾದಗಳು, ಲೇಖನಗಳು,ಪುಸ್ತಕಗಳು, ಕಾರ್ಯಾಗಾರಗಳು ಮತ್ತು ಪುಸ್ತಕ ಮಾರಾಟದ ಮೂಲಕ ಜನರಿಗೆ ಆರೋಗ್ಯ ಅನಾರೋಗ್ಯದ ಬಗ್ಗೆ ತಿಳುವಳಿಕೆ ನೀಡಲು ಹಗಲಿರುಳು ದುಡಿಯುತ್ತಿದ್ದಾರೆ.
ತಮ್ಮ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಮೆಟ್ಟಿನಿಂತು ಕನ್ನಡ ವೈದ್ಯ ಸಾಹಿತ್ಯ ಲೋಕಕ್ಕೆ ತಮ್ಮ ನಿಸ್ವಾರ್ಥ ಸೇವೆಯಿಂದಕೊಡುಗೆಯನ್ನು ನೀಡುತ್ತಿದ್ದಾರೆ.
ಅವರ ಲೇಖನಿಯಿಂದ, ಸಾಂಕ್ರಾಮಿಕ ರೋಗಗಳು ನಿಯಂತ್ರಣ ಮತ್ತು ತಡೆಗಟ್ಟುವಿಕೆ ಹತೋಟಿ ಎಂಬ ಈ ಪುಸ್ತಕವನ್ನು ರಚಿಸಿಕೊಟ್ಟಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡದ ಜನತೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.
ವೈದ್ಯ ವಿಜ್ಞಾನ ಸಾಹಿತ್ಯ ಕನ್ನಡ ಭಾಷೆಗೆ ಹೊಸತಲ್ಲ.
ಆಧುನಿಕ ವೈದ್ಯವಿಜ್ಞಾನದ ಬಗ್ಗೆ ಪುಸ್ತಕಗಳು ೧೯ನೇ ಶತಮಾನದಲ್ಲೇ ಹೊರಬಂದವು.
ಶಿವಪ್ಪ ಡಾ| ಡಿ.ವಿ.ರಾವ್,ಡಾ। ಶಂಕರ್, ಡಾ| ಸಿ.ಆರ್.ಚಂದ್ರಶೇಖರ್, ಡಾ| ಎಚ್ .ಚಂದ್ರಪ್ಪಗೌಡ, ಡಾ| ಸಿ.ಅನ್ನಮೂರ್ಣಮೃ ಇತ್ಯಾದಿಹಲವರ ಕೊಡುಗೆ ಅಪೂರ್ವವಾದದ್ದು, ಇದುವರೆಗೆ ಕನ್ನಡದಲ್ಲಿ ೨ಂಂಕ್ಕೂ ಹೆಚ್ಚಿನ ವೈದ್ಯ ಸಾಹಿತ್ಯ ಪುಸ್ತಕಗಳು ಪ್ರಕಟಗೊಂಡಿವೆ.
ಮಾರು ಕಟ್ಟೆಯಲ್ಲಿ ಓದುಗರಿಗೆ "ಲಭ್ಯವಿರುವುದು ಸುಮಾರು ೨00 ಪುಸ್ತಕಗಳು ಮಾತ್ರ ವೈದ್ಯವಿಜ್ಞಾನದ ಬೆಳವಣಿಗೆ ನಾಗಾಲೋಟದಲ್ಲಿ ಸಾಗಿದೆ.
ಅನೇಕ ಆವಿಷ್ಕಾರಗಳು.
ಹೊಸ ಸಂಶೋಧನೆಗಳು, ಪರಿಣಾಮಕಾರಿ ಚಿಕಿತ್ಸೆಗಳ ಬಗ್ಗೆ ಜನರಿಗೆ ಮಾಹಿತಿಬೇಕಾಗುತ್ತದೆ.
ಕಾಯಿಲೆಗಳ ಬಗ್ಗೆ ಅಜ್ಞಾನ, ಮೂಢನಂಬಿಕೆ, ಚಿಕಿತ್ಸೆಗಳ ಬಗ್ಗೆ ಕಂದಾಚಾರಗಳು ಅಪಾಯಕಾರಿ.
ಈ ದಿಸೆಯಲ್ಲಿ ಜನಗಳಿಗೆ ವೈಜ್ಞಾನಿಕ ಮಾಹಿತಿನೀಡುವ ಕಾರ್ಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಾರಂಭಿಸಿರುವ ಈ ಮಾಲೆ ಅತ್ಯಗತ್ಯವಾದದ್ದು, ಅನುಕರಣಾರ್ಹವಾದದ್ದು.
ಇದಕ್ಕಾಗಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಆಡಳಿತಾಧಿಕಾರಿಯಾದ ಶ್ರೀ ಅಶೋಕ ಎನ್.ಚಲವಾದಿ ಹಾಗೂ ಅವರ ಬಳಗದವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಕನ್ನಡಕ್ಕೆ ವೈದ್ಯವಿಜ್ಞಾನ ಪ್ರಸಾರಕ್ಕೆ ಅವರ ಕೊಡುಗೆ ಶ್ಲಾಘನೀಯವಾದದ್ದೆಂದು ನನ್ನಅಭಿಪ್ರಾಯ.
ಭಾರತದಲ್ಲಿ, ಜನರನ್ನು ರೋಗ ಪೀಡಿತರನ್ನಾಗಿ ಮಾಡುವಲ್ಲಿ ಸಾಂಕ್ರಾಮಿಕರೋಗಗಳು ಅಥವಾ ಆಂಟು ರೋಗಗಳು ಮುಖ್ಯವಾಗಿ ಕಾರಣವಾಗಿದೆ.
ಆಸ್ಪತ್ರೆಗಳಲ್ಲಿ ಅಡ್ಮಿಷನ್ ಆಗುವ ರೋಗಿಗಳಲ್ಲಿ ಶೇಕಡ 60ರಷ್ಟು ಜನ ಅಂಟು ರೋಗಗಳಿಂದ ನರಳುತ್ತಿರುವುದು ಕಂಡು ಬಂದಿದೆ.
ಇದರಲ್ಲಿ ಶೇಕಡ 25ರಷ್ಟು ಮಂದಿ ಸೋಂಕು ರೋಗಗಳಿಂದ ಮತ್ತು ಪರಾವಲಂಬಿ (ಪ್ಯಾರಾಸಿಟಿಕ್ ಡಿಸೀಸಸ್) ರೋಗಗಳಿಂದ ಕೂಡಿರುವವರೆಂದು ತಿಳಿದು ಬಂದಿದೆ.
ಬಹಳಷ್ಟು ಈ ರೋಗಗಳನ್ನು ಸರಳ ವಿಧಾನಗಳಾದ ಪರಿಸರ ನೈರ್ಮಲ್ಯದ ಅಭಿವೃದ್ಧಿ, ಸುರಕ್ಷಿತ ನೀರಿನ ಪೂರೈಕೆ,ಮಲಮೂತ್ರಗಳ ಸೂಕ್ತ ವಿಲೇವಾರಿ, ವೈಯಕ್ತಿಕ ಶುಚಿತ್ವ, ರೋಗನಿರೋಧಕ ಚುಚ್ಚುಮದ್ದಿನಿಂದ ಮತ್ತು ಆರೋಗ್ಯ ಶಿಕ್ಷಣದಿಂದ ತಡೆಗಟ್ಟಬಹುದಾಗಿದೆ.
ಸಾಂಕ್ರಾಮಿಕ ರೋಗಗಳನ್ನು ಆರಂಭದ ಹಂತದಲ್ಲೇ ಪತ್ತೆ ಮಾಡಿದರೆ.
ಸುಲಭವಾಗಿ ಚಿಕಿತ್ಸೆಯನ್ನು ಮಾಡಿಸಬಹುದು.
ಅನೇಕ ಅಭಿವೃದ್ಧಿ ಹೊಂದಿರುವ ರಾಷ್ಟಗಳಲ್ಲಿ ಈ ರೋಗಗಳನ್ನು ಪೂರ್ಣವಾಗಿ ನಿಯಂತ್ರಣ ಮಾಡಿರುವುದಲ್ಲದೆ,ಕೆಲವನ್ನು ನಿರ್ಮೂಲವನ್ನು ಮಾಡಿರುತ್ತಾರೆ.
ಅಂತಹ ಸಾಮಾನ್ಯವಾದವುಗಳೆಂದರೆ,ಅತಿಸಾರ ಭೇದಿ, ಆಮಶಂಕೆ ಮತ್ತು ಶ್ವಾಸಕೋಶದ ಸೋಂಕುಗಳು ಅಲ್ಲದೆ ಮಲೇರಿಯಾ, ಕ್ಷಯರೋಗ, ಕಾಲರಾ, ಕುಷ್ಠರೋಗ, ದಡಾರ, ಲೈಂಗಿಕ ರೋಗಗಳು,ಜಾಂಡೀಸ್, ನಾಯಿಕೆಮ್ಮು ಧನುರ್ವಾಯು, ಪೋಲಿಯೋ ಮೈಲೈಟಿಸ್,ಜಂತುಹುಳುಗಳ ಬಾಧೆ ಮತ್ತು ಚರ್ಮ ರೋಗ ಮೊದಲಾದುವು.
ಆದರೆ, ಭಾರತದಲ್ಲಿ ಸಾರ್ವಜನಿಕರ ಸಹಕಾರದ ಕೊರತೆಯಿಂದಾಗಿ ಅಜ್ಞಾನದಿಂದಾಗಿ, ರಾಜಕೀಯ ಬದ್ಧತೆ ಇಲ್ಲದೆ ಇರುವುದರಿಂದಾಗಿ, ಇತ್ತೀಚೆಗೆ,ಕಾಯಕ ಸಂಸ್ಕೃತಿ ಕಡಿಮೆಯಾಗಿರುವುದರಿಂದ
ಸಾಂಕ್ರಾಮಿಕರೋಗಗಳನ್ನು ನಿಯಂತ್ರಿಸಲು/ನಿರ್ಮೂಲನಾ ಮಾಡಲು ಕಷ್ಟವಾಗುತ್ತಿದೆ.
“ಸಾಂಕ್ರಾಮಿಕ ರೋಗಗಳು' ಪುಸ್ತಕವನ್ನು, ಸಾಂಕ್ರಾಮಿಕ ರೋಗಗಳ ಪರಿಚಯಮಾಡಿಕೊಡುವುದಕ್ಕಾಗಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿಯೇ ರಚಿಸಲಾಗಿದೆ.
ನಾನು, ಹದಿಮೂರು ವರ್ಷಗಳ ಕಾಲ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ಜನಾರೋಗ್ಯ ಬೋಧಕನಾಗಿ ಕಾರ್ಯನಿರ್ವಹಿಸಿದ್ದರ ಅನುಭವ-ಅಧ್ಯಯನದ ಆಧಾರದ ಮೇಲೆ ಈ ಕೃತಿಯನ್ನು ರಚಿಸಿರುತ್ತೇನೆ.
ಸಾರ್ವಜನಿಕರಿಗೆ ಈ ಕೃತಿ ಉಪಯುಕ್ತವಾಗುತ್ತದೆಂದು ಭಾವಿಸಿದ್ದೇನೆ.
ಜನರ ಆರೋಗ್ಯ ವೃದ್ಧಿಯಾಗಲಿ ಎಂಬುದೇ ನನ್ನ ಆಶಯ.
"ಸಾಂಕ್ರಾಮಿಕ ರೋಗಗಳು', ಕೃತಿಯನ್ನು ರಚಿಸಲು ಅವಕಾಶ ಮಾಡಿಕೊಟ್ಟ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ| ಸಿದ್ಧ ಲಿಂಗಯ್ಯನವರಿಗೆ ಆಡಳಿತಾಧಿಕಾರಿ ಶ್ರೀ ಅಶೋಕ ಚಲವಾದಿ ಅವರಿಗೆ ಧನ್ಯವಾದಗಳು.
ಕೃತಿಯನ್ನುರಚಿಸಲು ಮಾರ್ಗದರ್ಶನ ನೀಡಿದ ಖ್ಯಾತ ವೈದ್ಯ ಸಾಹಿತಿ ಡಾ| ಸಿ. ಆರ್. ಚಂದ್ರಶೇಖರ್, ಕಲಾವಿದ ಸಹೋದರ, ಶ್ರೀ ಎನ್.ಕೃಷ್ಣ, ಮತ್ತು ಇ. ರಾಜೇಶ್ ಅವರಿಗೆಚಿರಯಣಿಯಾಗಿರುತ್ತೇನೆ.
ಸಾಂಕ್ರಾಮಿಕ ರೋಗ ಶಾಸ್ತ್ರವೆಂದರೇನು?
ಸಾಂಕ್ರಾಮಿಕ ರೋಗಗಳನ್ನು ಇಂಗ್ಲೀಷ್ನಲ್ಲಿ Communicable Disease ಎಂದು ಕರೆಯುತ್ತಾರೆ.
ಸಾಂಕ್ರಾಮಿಕವಾಗಿ ಹರಡುವ ರೋಗಗಳನ್ನು ಕುರಿತು ಅಧ್ಯಯನ, ತನಿಖೆ ಮಾಡುವುದನ್ನು ಸಾಂಕ್ರಾಮಿಕ ರೋಗಶಾಸ್ತ್ರವೆಂದು ಕರೆಯುತ್ತಾರೆ.
ಈ ಶಾಸ್ತ್ರದಲ್ಲಿಸಾಂಕ್ರಾಮಿಕ (ಅಂಟು) ರೋಗಗಳು, ಸಾಂಕ್ರಾಮಿಕವಾಗಿ ಹರಡಲು ಕಾರಣಗಳನ್ನು ತಿಳಿದುಕೊಳ್ಳಲಾಗುವುದಲ್ಲದೆ, ತಡೆಗಟ್ಟುವಿಕೆ, ನಿಯಂತ್ರಿಸುವುದರ ಬಗ್ಗೆಯೂ ಕಾರ್ಯಕ್ರಮಗಳನ್ನು ಸಮುದಾಯದ ಸಹಕಾರದೊಂದಿಗೆ, ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತದೆ.
ಸಾಂಕ್ರಾಮಿಕ ರೋಗಗಳ ಅಧ್ಯಯನದಿಂದ, ಸಾಂಕ್ರಾಮಿಕ ರೋಗಗಳನ್ನು ವೈಯಕ್ತಿಕವಾಗಿ ಮತ್ತು ಸಮುದಾಯ ಮಟ್ಟದಲ್ಲಿ ಹೇಗೆ ನಿರ್ವಹಿಸಬೇಕೆಂಬುದನ್ನು ಅಥೈಣೃಸಿಕೊಳ್ಳಲಾಗುತ್ತದೆ.
ಅಂಟು ರೋಗಗಳು ಹೇಗೆ ಉಂಟಾಗುತ್ತವೆ, ಅದು ಮಾನವ ಜನಸಂಖ್ಯೆಯಲ್ಲಿಹೇಗೆ ಉಂಟಾಗುತ್ತದೆ.
ರೋಗಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ಸಂಗತಿಗಳ ಬಗ್ಗೆಯು ವಿಷದವಾಗಿ ಸಾಂಕ್ರಾಮಿಕ ರೋಗ ಶಾಸ್ತ್ರ ಶೋಧನೆ-ಪರಿಶೋಧನೆ ಮಾಡುತ್ತದೆ.
ಅಂಟುರೋಗಗಳು (ಕಮ್ಯುನಿಕಬಲ್ ಡಿಸೀಸಸ್) ಹರಡಲು ಮುಖ್ಯ ಸಂಗತಿಗಳಾವುವು?
ಮನುಷ್ಯನಲ್ಲಿ ರೋಗ ಹರಡಲು ಮೂರು ವಸ್ತುಗಳು ಅಗತ್ಯ.
ಅವುಗಳು ಯಾವುವೆಂದರೆ,ರೋಗಕಾರಕ ಅಥವಾ ಏಜೆಂಟ್ .
ಅಶ್ರಯದಾತ ಅಥವಾ ಹೋಸ್ಟ್ ಮತ್ತು ಪರಿಸರ ಅಥವಾ ಎನ್ವಿವಿರಾನ್ ಮೆಂಟ್.
ಈ ಮೂರು ಸಂಗತಿಗಳನ್ನು ಸಾಂಕ್ರಾಮಿಕತೆಯ ತ್ರಿಕೋನ ಎಂದು ಕರೆಯಲಾಗುತದೆ.
ಸಾಂಕ್ರಾಮಿಕ ರೋಗಗಳು ಇವುಗಳಲ್ಲಿ ಯಾವುದೇ ಒಂದು ಇಲ್ಲದಿದ್ದರೂ ರೋಗ ಉಂಟಾಗುವುದಿಲ್ಲ .
ರೋಗ ಉಂಟಾಗಲು ಮೊಟ್ಟಮೊದಲು ಅಗತ್ಯವಾದದ್ದು- ರೋಗಕಾರಕ ಅಥವಾ ಡಿಸೀಸ್ಏಜೆಂಟ್.
ರೋಗಕಾರಕವು ಸಜೀವಿ ಅಥವಾ ನಿರ್ಜೀವಿ ಆಗಿರಬಹುದು.
ರೋಗಕಾರಕಗಳನ್ನು ಐದು ಗುಂಪುಗಳನ್ನಾಗಿ ವಿಂಗಡಿಸಬಹುದು.
(ಆ) ಚೈವಿಕ ಕಾರಕಗಳು : ಇವು ಸಜೀವಿ ಏಜೆಂಟ್ಗಳಾಗಿರುತ್ತವೆ.
ಉದಾಹರಣೆಗೆ ವೈರಸ್ಗಳು, ಬ್ಯಾಕ್ಟಿರಿಯಾ, ಫಂಗೈ, ಪ್ರೋಟಾಜೋವಾ. . . ಇತ್ಯಾದಿ ಇವು ಸೋಂಕಿನ ಮೂಲದಲ್ಲಿ ಕಂಡುಬರುತ್ತವೆ.
(ಆ) ಪೌಷ್ಠಿಕ ಕಾರಕಗಳು : ಇವು ಸಸಾರಜನಕ(ಪ್ರೋಟೀನ್ಗಳು, ಕೊಬ್ಬುಗಳು (ಫ್ಯಾಟ್ಸ್) ಶರ್ಕರಪಿಷ್ಠಗಳು (ಕಾರ್ಬೊಹೈಡ್ರೇಟ್ಸ್)ವಿಟಮಿನ್ಗಳು, ಖನಿಜಗಳು ಮತ್ತು ನೀರು.
ಪೌಷ್ಠಿಕ ಆಹಾರ ಅತಿಯಾದರೆ ಅಥವಾ ಕೊರತೆ ಉಂಟಾದರೆ, ಪೌಷ್ಠಿಕ ಆಹಾರದ ರೋಗಗಳಿಗೆ ದಾರಿಮಾಡಿಕೊಡಬಹುದು.
(ಇ) ಭೌತಿಕ ಕಾರಕಗಳು : ಇವು ಉಷ್ಣತೆ, ಶೀತ,ಒತ್ತಡ (ಪ್ರೆಶರ್), ರೇಡಿಯೇಷನ್, ವಿದ್ಯುತ್ ಶಕ್ತಿ .
(ಈ) ರಾಸಾಯನಿಕ ಕಾರಕಗಳು : ಇವು ಲೋಹಗಳು (ಉದಾ: ಸೀಸ), ಹೊಗೆ , ಧೂಳು, ಗ್ಯಾಸ್ಗಳು ಇತ್ಯಾದಿ.
(ಊ) ಕೆಲವು ಸಂಪ್ರದಾಯಗಳು ಮತ್ತು ಹವ್ಯಾಸಗಳು : ಧೂಮಪಾನದ ಚಟದಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ.
ಬಯಲಿನಲ್ಲಿ ಮಲಮೂತ್ರಗಳ ವಿಸರ್ಜನೆಯಿಂದ ಭೂಮಾಲಿನ್ಯ ಉಂಟಾಗುವುದಲ್ಲದೆ ಪರಾವಲಂಬಿ ಜೀವಿಗಳಿಂದಲೂ ರೋಗಗಳು ಹರಡುತ್ತವೆ.
(ಋ) ಮನುಷ್ಯನ ನಡವಳಿಕೆ : ಶಾರೀರಿಕ ವ್ಯಾಯಾಮವನ್ನು ನಿಯಮಿತವಾಗಿ ಮಾಡದಿರುವುದು, ಮದ್ಯಪಾನದ ಚಟ ಮತ್ತು ಕೆಲವು ಔಷಧಿಗಳ ಸೇವನೆಯ ವ್ಯಸನದಿಂದ ಶಾರೀರಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
(ಎ)ಪರಿಸರ ಸಂಗತಿಗಳು : ವ್ಯಕ್ತಿ ಮತ್ತು ಸಮುದಾಯ ಚೆನ್ನಾಗಿರಬೇಕಾದರೆ, -ಆರೋಗ್ಯ ಪರಿಸರ ಅತ್ಯಗತ್ಯ ವಿವರಣಾತ್ಮಕ ಉದ್ದೇಶದಿಂದ ಪರಿಸರವನ್ನು ಮೂರುಘಟಕಗಳನ್ನಾಗಿ ವಿಂಗಿಡಸಲಾಗಿದೆ.
ಎ) ಭೌತಿಕ ಪರಿಸರ (ಫಿಸಿಕಲ್ ಎನ್ವಿರಾನ್ ಮೆಂಟ್) : ಭಾರತದಲ್ಲಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣ ಅನಾರೋಗ್ಯ ಪರಿಸರ.
ಅಂದರೆ,ಸುರಕ್ಷಿತವಲ್ಲದ ನೀರಿನ ಪೂರೈಕೆ, ಕಲುಷಿತಗೊಂಡ ಮಣ್ಣು, ವಾಸಿಸಲು ಸರಿಯ್ಯಾದಮನೆ ಇಲ್ಲದಿರುವುದು.
ಮನುಷ್ಯನ ಮಲಮೂತ್ರಗಳು ಮತ್ತು ಘನರೂಪದ ತ್ಯಾಜ್ಯವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು.
ಬಿ) ಜೈವಿಕ ಪರಿಸರ (ಬಯಾಲಾಜಿಕಲ್ ಎನ್ವಿರಾನ್ಮೆಂಟ್) : ರೋಗ ಉಂಟಾಗಲು ಜೈವಿಕ ಪರಿಸರವು ಕಾರಣವಾಗಿರಬಹುದು.
ಉದಾ : ಪ್ರಾಣಿಗಳು,ಕೀಟಗಳು, ಇಲಿ, ಹೆಗ್ಗಣಗಳು ಇತ್ಯಾದಿ.
ಸಿ) ಸಾಮಾಜಿಕ ಪರಿಸರ (ಸೋಶಿಯಲ್ ಎನ್ವಿರಾನ್ಮೆಂಟ್) :
ಸಂಪ್ರದಾಯಗಳು, ಹವ್ಯಾಸಗಳು, ಸಂಸ್ಕೃತಿ, ಶೈಕ್ಷಣಿಕ ಗುಣಮಟ್ಟ ಮೊದಲಾದವು ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ರೋಗ ಉಂಟಾಗಲು ಕಾರಣವಾಗಿರುತ್ತದೆ.
ತಡೆಗಟ್ಟುವ ಹಂತಗಳು :ಈ ಆಧುನಿಕ ದಿನಗಳಲ್ಲಿ ತಡೆಗಟ್ಟುವ ಪರಿಕಲ್ಪನೆಯ ವ್ಯಾಪ್ತಿ ಹೆಚ್ಚಾಗಿದೆ.
ತಡೆಗಟ್ಟುವುದನ್ನು ಮೂರು ಹಂತಗಳನ್ನಾಗಿ ವಿವರಿಸಬಹುದು.
1) ಪ್ರಾಥಮಿಕವಾಗಿ ತಡೆಗಟ್ಟುವಿಕೆ (ಪ್ರೈಮರಿ ಪ್ರಿವೆನ್ಷನ್).
ಪ್ರಾಥಮಿಕವಾಗಿ ತಡೆಗಟ್ಟುವಿಕೆ :ಪ್ರಾಥಮಿಕವಾಗಿ ತಡೆಗಟ್ಟುವಿಕೆ ಎಂದರೆ, ರೋಗ ಉಂಟಾಗುವ ಮೂದಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
ಪ್ರಾಥಮಿಕವಾಗಿಯೇ ಮುಂಜಾಗ್ರತ ಕ್ರಮಗಳನ್ನುತೆಗೆದುಕೊಂಡರೆ, ರೋಗ ಉಂಟಾಗುವ ಸಂಭಾವ್ಯತೆಯನ್ನು ತೆಗೆದು ಹಾಕಬಹುದು.
ನಿರ್ದಿಷ್ಟ ನಿರ್ವಹಣಾ ಕಾರ್ಯಕ್ರಮವೆಂದರೆ:ಎ) ಆರೋಗ್ಯದಿಂದಿರಲು ಉತ್ತೇಜನ ನೀಡುವುದು.
ಬಿ) ನಿರ್ದಿಷ್ಟ ರಕ್ಷಣೆಯನ್ನು ನೀಡುವುದು.
ಆರೋಗ್ಯ ಉತ್ತೇಜನ :ನಾವು ಅನೇಕ ರೋಗಗಳನ್ನು ತಡೆಗಟ್ಟಬಹುದು.
ಅವುಗಳಿಂದರೆ, ಕಾಲರಾ,ಟೈಫಾಯಿಡ್ ಜ್ವರ, ಕ್ಷಯರೋಗ ಮತ್ತು ಪೌಷ್ಟಿಕ ಆಹಾರದ ಕೊರತೆಯ ಕಾಯಿಲೆಗಳು.
ವೈಯಕ್ತಿಕವಾಗಿ ಮತ್ತು ಸಮುದಾಯದಲ್ಲಿ ಆರೋಗ್ಯದ ಮಹತ್ತ್ವದ ಬಗ್ಗೆ ಅರಿವು ಮೂಡಿಸಿ, ಆರೋಗ್ಯಾಬಿವೃದ್ಧಿ ಬಗ್ಗೆ ಉತ್ತೇಜನವನ್ನು ನೀಡುವುದರ ಮೂಲಕವೇ ಕಾಯಿಲೆಗಳನ್ನು ತಡೆಗಟ್ಟಬಹುದು.
ಅಂತಹ ಕಾರ್ಯಕ್ರಮಗಳು ಯಾವುವೆಂದರೆ,1. ಸಾಕಷ್ಟು ಪೌಷ್ಠಿಕ ಆಹಾರದ ಪೂರೈಕೆ.
2. ಸುರಕ್ಷಿತ ನೀರಿನ ಪೂರೈಕೆ.
3. ಮನುಷ್ಯನ ಮಲ-ಮೂತ್ರಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಸುರಕ್ಷಿತರೀತಿಯಲ್ಲಿ ವಿಲೇವಾರಿ ಮಾಡುವುದು.
4.ವೈಯಕ್ತಿಕ ಶುಚಿತ್ವ.
5.ಆರೋಗ್ಯ ಶಿಕ್ಷಣ.
6.ಶಾರೀರಿಕ ವ್ಯಾಯಾಮ.
7.ಅವಧಿಗೊಂದಾವರ್ತಿ ಆರೋಗ್ಯ ತಪಾಸಣೆ.
8.ಜನರ ಜೀವನದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದು.
ನಿರ್ದಿಷ್ಟ ರಕ್ಷ ಣೆ:ನಿರ್ದಿಷ್ಟವಾದ ರಕ್ಷಣೆಯಿಂದ, ನಿರ್ದಿಷ್ಟ ಕಾಯಿಲೆಗಳನ್ನು ನಿರ್ದಿಷ್ಟ ಕ್ರಮಗಳಿಂದ ನಾವು ತಡೆಗಟ್ಟಬಹುದು.
ಉದಾಹರಣೆಗೆ ಸಕಾಲದಲ್ಲಿ ರೋಗನಿರೋಧಕ ಚುಚ್ಚುಮದ್ದುಗಳನ್ನು ಕೊಡಿಸುವುದರಿಂದ ಕ್ಷಯರೋಗ, ಡಿಫ್ಟೀರಿಯಾ, ನಾಯಿಕೆಮ್ಮು,ಧನುರ್ವಾಯು (ಟೆಟನಸ್) ಪೋಲಿಯೋ ಮತ್ತು ಮೀಸಲ್ಸ್ (ದಡಾರ)ನ್ನು ತಡೆಗಟ್ಟಬಹುದು.
ವಿಟಮಿನ್ "ಎ'ಯನ್ನು ಮಕ್ಕಳಿಗೆ ಕೊಡಿಸುವುದರಿಂದ ಕ್ಸೀರಾಫ್ತಾಲಾಮಿಯಾ ಎಂಬ ಕಣ್ಣಿನ ದೋಷ ಉಂಟಾಗುವುದನ್ನು ತಡೆಗಟ್ಟಬಹುದು.
ಪ್ರಾಥಮಿಕ ಹಂತದಿಂದಲೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ನಮ್ಮೆಲ್ಲರ ಗುರಿಯಾಗಬೇಕು.
ಅಭಿವೃದ್ಧಿ ಹೊಂದಿರುವ ಅನೇಕ ರಾಷ್ಟ್ರಗಳು ಅನೇಕ ಸೋಂಕು ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ನಿರ್ಮೂಲನಗೊಳಿಸಿವೆ.
ದ್ವಿತೀಯ ಹಂತದ ತಡೆಗಟ್ಟುವಿಕೆ (ಸೆಕೆಂಡರಿ ಪ್ರಿವೆನ್ಷನ್):ದ್ವಿತೀಯ ಹಂತದ ತಡೆಗಟ್ಟುವಿಕೆಯಲ್ಲಿ ರೋಗ ಹರಡುವುದನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ, ರೋಗದಿಂದ ಉಂಟಾಗುವ ತೊಡಕುಗಳನ್ನು ತಡೆಗಟ್ಟಬಹುದು.
ನಿರ್ದಿಷ್ಟ ನಿರ್ವಹಣಾ ಕ್ರಮಗಳು ಯಾವುವೆಂದರೆ:ಎ) ಬೇಗನೆ ರೋಗವನ್ನು ಪತ್ತೆಮಾಡುವುದು ರೋಗದ ಪ್ರಕರಣವನ್ನು ಪತ್ತೆಹಚ್ಚಲು ಕಾರ್ಯಕ್ರಮ ಕೈಗೊಳ್ಳುವುದು, ಅಗತ್ಯವಾದ ತಪಾಸಣೆಗಳನ್ನು ಮಾಡುವುದು.
ಬಿ) ಅಗತ್ಯವಾದ ಚಿಕಿತ್ಸೆಯನ್ನು ವ್ಯವಸ್ಥೆ ಮಾಡುವುದು.
ಎಲ್ಲ ರೋಗಗಳನ್ನು ವ್ಯಾಕ್ಸಿನ್ನಿಂದಲೇ ತಡೆಗಟ್ಟಲು ಸದ್ಯಕ್ಕೆ ಸಾಧ್ಯವಿಲ್ಲ.
ಉದಾ. : ಕುಷ್ಠರೋಗ, ಸಿಫಿಲಿಸ್, ಮಲೇರಿಯಾ.
ಆದಷ್ಟು ಬೇಗನೆ ರೋಗವನ್ನು ಗುರ್ತಿಸಿ, ಚಿಕಿತ್ಸೆಯನ್ನು ಕೊಡಿಸುವುದರಿಂದ ಸಾಂಕ್ರಾಮಿಕವಾಗಿ ಹರಡುವುದನ್ನುತಡೆಗಟ್ಟಲು ಸಾಧ್ಯವಾಗುತ್ತದೆ.
ತೃತೀಯ ಹಂತದ ತಡೆಗಟ್ಟುವಿಕೆ (ಟರ್ಶರಿ ಪ್ರಿವೆನ್ಷನ್):ಯಾವಾಗ ರೋಗ ಆರಂಭದ ಹಂತವನ್ನು ದಾಟಿ ಪ್ರಗತಿ ಹೊಂದಿದ್ದರೂ,ಮುಂದೆ ಆಗಬಹುದಾದ ತೊಡಕುಗಳನ್ನು ಟರ್ಶರಿ ಪ್ರಿವೆನ್ಷನ್ನಿಂದ ತಡೆಗಟ್ಟಬಹುದು.
ತೃತೀಯ ಹಂತದ ತಡೆಗಟ್ಟುವಿಕೆಯಲ್ಲಿ ಅಂಗವೈಕಲ್ಯವನ್ನು ಮಿತಗೊಳಿಸಿ.
ನರಳಿಕೆಯನ್ನು ಕನಿಷ್ಟ ಮಟ್ಟದಲ್ಲಿ ಇಡಲು ಸಾಧ್ಯವಾಗುತ್ತದೆ.
ನಿರ್ದಿಷ್ಟವಾದ ನಿರ್ವಹಣೆಯೆಂದರೆ:
(ಎ) ಅಂಗವೈಕಲ್ಯವನ್ನು ಮಿತಗೊಳಿಸುವುದು.
(ಬಿ) ಪುನರ್ವಸತಿ ಕಾರ್ಯಕ್ರಮ.
ಸಾಂಕ್ರಾಮಿಕ ರೋಗಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವ ಪಾರಿಭಾಷಿಕ ಪದಗಳು
(1) ಇನ್ಫೆಕ್ಷನ್ (ಸೋಂಕು) : ಸೋಂಕು ಕಾರಕಗಳು ಮನುಷ್ಯನ ಅಥವಾ ಪ್ರಾಣಿಗಳ ಶರೀರವನ್ನು ಪ್ರವೇಶಿಸಿ ಮತ್ತು ಅಭಿವೃದ್ಧಿ ಹೊಂದುವುದು ಅಥವಾ ದ್ವಿಗುಣಗೊಳ್ಳುವುದು.
ಸೋಂಕನ್ನು ಹೊಂದಿರುವ ವ್ಯಕ್ತಿ ಕೆಳಕಂಡವುಗಳನ್ನು ತೋರಿಸಬಹುದು.
ಎ) ಸೋಂಕಿನ ರೋಗದ ಚಿಹ್ನಗಳನ್ನು ಮತ್ತು ಲಕ್ಷಣಗಳನ್ನುತೋರಿಸಬಹುದು.
ಬಿ) ಯಾವುದೇ ಚಿಹ್ನೆಗಳನ್ನು ಮತ್ತು ಲಕ್ಷಣಗಳನ್ನು ತೋರಿಸದೇ ಇರಬಹುದು (ಕ್ಯಾರಿಯರ್).
ಸೋಂಕನ್ನು, ಪ್ರಯೋಗ ಶಾಲೆಯ ಪರೀಕ್ಷೆಯಿಂದ ಮಾತ್ರ ಪತ್ತೆಹಚ್ಚಬಹುದು.
ಇನ್ಪೆಕ್ಷಿಯಸ್ ಏಜೆಂಟ್ (ಸೋಂಕುಕಾರಕಗಳು):
ರೋಗಾಣು: ಸಾಮಾನ್ಯವಾಗಿ ಸೂಕ್ಷ್ಮ ರೋಗಾಣುಗಳು (ಮೈಕ್ರೋಆರ್ಗಾನಿಸಮ್) ಬ್ಯಾಕ್ಟಿರಿಯಾ, ವೈರಸ್, ಪರಾವಲಂಬಿ ಜೀವಿಗಳು, ಫಂಗಸ್.
ಇವೂ ಸಹ ಸೋಂಕನ್ನು ಉತ್ಪತ್ತಿ ಮಾಡಬಹುದು ಅಥವಾ ಸೋಂಕಿನ ರೋಗವನ್ನುಉಂಟು ಮಾಡಬಹುದು.
ಇನ್ಫಕ್ಷಿಯಸ್ ಡಿಸೀಸ್ (ಸೋಂಕುರೋಗ):ಮನುಷ್ಯನಲ್ಲಿ ಅಥವಾ ಪ್ರಾಣಿಗಳಲ್ಲಿ ಸೋಂಕಿನಿಂದಾಗಿ ರೋಗ ಉಂಟಾಗಿರುವುದು.
(2) ಎಪಿಡೆಮಿಕ್ (ಸಾಂಕ್ರಾಮಿಕ, ಸರ್ವತ್ರ ವ್ಯಾಪಿಸಿರುವ, ವ್ಯಾಪಕ):ಸಮುದಾಯದಲ್ಲಿ ಸಾಮಾನ್ಯ (ನಾರ್ಮಲ್) ನಿರೀಕ್ಷೆಗಿಂತಲೂ ಅತಿ ಹೆಚ್ಚಾಗಿರೋಗ ತಲೆದೋರಿರುವುದು ಅಥವಾ ಒಂದು ಕ್ಷಣದಲ್ಲಿ ಅನೇಕ ಜನರನ್ನು ಏಕಕಾಲದಲ್ಲಿ ಸಂಭವಿಸಿ ಬಾಧಿಸುವುದು ಅಥವಾ ಯಾವುದೇ ನಿರ್ದಿಷ್ಟ ರೋಗ ದಿಢೀರನೆ ಸ್ಫೋಟಿಸಿ ಹೆಚ್ಚು ಜನರ ಮೇಲೆ ದಾಳಿ ಮಾಡಿರುವುದು.
ಭಾರತದಲ್ಲಿ ಸಾಮಾನ್ಯವಾಗಿ ಹರಡುವ ಸಾಂಕ್ರಾಮಿಕ ರೋಗಗಳು:ಕಾಲರಾ,ಕರುಳಬೇನೆ, ದಡಾರ, ಸೀತಾಳೆ ಸಿಡುಬು (ಚಿಕನ್ಪಾಕ್), ವೈರಲ್ ಹೈಪಟೈಟಸ್-ಎ (ಜಾಂಡೀಸ್), ಎಂಟ್ರೀಕ್ ಫಿವರ್ ಮತ್ತು ಸೆರೆಬ್ರೋ-ಸ್ಟೈನಲ್ ಮೆನಿನ್ಜಿಟಿಸ್.
ಇತ್ತೀಚೆಗೆ ಕಂಡು ಹಿಡಿದಿರುವ ರೋಗ ಏಡ್ಸ್.
ಇದು ವಿಶ್ವವ್ಯಾಪಿಯಾಗಿ ಹರಡಿರಂವಂತಹಂದು.
ಕೆಲವು ನಾನ್ಕಮ್ಯುನಿಕೆಬಲ್ ಡಿಸೀಸ್(ಅಂಟುರೋಗವಲ್ಲದವು)ಗಳೆಂದರೆ, ಕ್ಯಾನ್ಸರ್, ಕರೋನರಿ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಸಂಚಾರಿ ಅಪಘಾತಗಳು.
ಸಾಂಕ್ರಾಮಿಕ ರೋಗಗಳು ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಂಡುಬರುತ್ತವೆ.
(3) ಎಂಡೆಮಿಕ್ (ಸ್ಥಾನಿಕ):ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ರೋಗ ಸ್ಥಿರವಾಗಿದ್ದರೆ ಅಥವಾ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಅಂಟು ರೋಗ ಎಡಬಿಡದೆ ಬರುತ್ತಿದ್ದರೆ ಅದನ್ನು ಎಂಡೆಮಿಕ್ ಅಥವಾ ಸ್ಥಾನಿಕವಾಗಿ ಕಂಡುಬರುವ ಅಂಟುರೋಗ ಎಂದು ಕರೆಯುತ್ತಾರೆ.
ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಎಂಡೆಮಿಕ್ ರೋಗಗಳೆಂದರೆ ಎಂಟ್ರಿಕ್ಫಿವರ್ (ಕರುಳಜ್ಜರ, ವಿಷಮಜ್ವರ) ಅತಿಸಾರ ಭೇದಿ ಮತ್ತು ಡೀಸೆಂಟ್ರಿ(ಆಮಶಂಕೆ, ರಕ್ತಭೇದಿ), ವೈರಲ್ ಹೆಪಟೈಟಿಸ್ (ಜಾಂಡೀಸ್), ಕುಷ್ಠರೋಗ,ಫೈಲೇರಿಯಾ, ಮಲೇರಿಯಾ, ಕ್ಷಯರೋಗ ಮೊದಲಾದವು.
ಪರಿಸ್ಥಿತಿ ಅನುಕೂಲಕರವಾಗಿದ್ದರೆ ಎಂಡೆಮಿಕ್ ರೋಗಗಳು ಅಧಿಕಗೊಳ್ಳುತ್ತವೆ.
(4) ಸ್ಟೊರಾಡಿಕ್ :ವಿರಳವಾಗಿ ಅಥವಾ ಚದುರಿದಂತೆ ರೋಗ ಸಂಭವಿಸಿದರೆ ಅದನ್ನು ಸ್ಟೊರಾಡಿಕ್ ಅಥವಾ ವಿರಳವಾಗಿ ಹರಡುವುದು ಎನ್ನುತ್ತಾರೆ.
ಉದಾ : ಪೋಲಿಯೊ ಮೈಲೈಟಿಸ್.
ಎಪಿಡೆಮಿಕ್ ಅಥವಾ ಸಾಂಕ್ರಾಮಿಕತೆಯ ಆರಂಭದ ಅಂಶ ಸ್ಟೊರಾಡಿಕ್ ಆಗಿರಬಹುದು.
(5) ಪಾಂಡೆಮಿಕ್ ವಿಶ್ವವ್ಯಾಪಿ :ಸಾಂಕ್ರಾಮಿಕ ಕಾಯಿಲೆ, ದೇಶದಿಂದ ದೇಶಕ್ಕೆ ಅಥವಾ ಇಡೀ ಪ್ರಪಂಚದಲ್ಲಿ ಹರಡಿದ್ದರೆ ಅದನ್ನು ಪಾಂಡೆಮಿಕ್ ಅಥವಾ ವಿಶ್ವವ್ಯಾಪಿ ಕಾಯಿಲೆ ಎನ್ನುತ್ತಾರೆ.
ಉದಾ : ಏಡ್ದ್ನ ಸಾಂಕ್ರಾಮಿಕತೆ, ಈ ಹಿಂದೆ ವಿಶ್ವವ್ಯಾಪಿಯಾಗಿ ಹರಡಿದ್ದ ರೋಗಗಳೆಂದರೆ, ಇನ್ಫ್ಲೂಯೆಂಜಾ, ಕಾಲರಾ ಮತ್ತು ಫ್ಲೇಗ್.
ಜುನೋಸಿಸ್:ರೋಗಗಳು ಅಥವಾ ಸೋಂಕುಗಳು ಸ್ವಾಭಾವಿಕವಾಗಿ ಬೆನ್ನುಮೂಳೆಯ ಪ್ರಾಣಿಗಳು ಮತ್ತು ಮನ್ಯುಷ್ಯರ ನಡುವೆ ಹರಡುತ್ತವೆ.
ಉದಾ :ರೇಬಿಸ್ (ನಾಯಿಹುಚ್ಚು), ಫ್ಲೇಗ್, ಬೊವೈನ್ ಟಿ. ಬಿ, ಆಂಥ್ರಾಕ್ಸ್.
(7) ಕಮ್ಯುನಿಕಬಲ್ ಡಿಸೀಸ್ (ಅಂಟುರೋಗ):ನಿರ್ದಿಷ್ಟ ಸೋಂಕಿನ ಕಾರಕ (ಏಜೆಂಟ್)ಗಳಿಂದ ಅಥವಾ ಅದರ ವಿಷದ ಉತ್ಪನ್ನದಿಂದ ಕೆಲವು ನಿಶ್ಚಿತ ಸ್ಥಿತಿಗಳಲ್ಲಿ ರೋಗ, ವ್ಯಕ್ತಿಗತವಾಗಿ ಸಮುದಾಯದಲ್ಲಿ ಹರಡುವುದನ್ನು ಅಂಟುರೋಗ ಅಥವಾ ಕಮ್ಯುನ್ಕಬಲ್ ಡಿಸೀಸ್ ಎನ್ನುತ್ತಾರೆ.
(8) ನಾನ್ಕಮ್ಯುನಿಕಬಲ್ ಡಿಸೀಸ್ (ಅಂಟುರೋಗವಲ್ಲದ ಕಾಯಿಲೆಗಳು):ಹೃದಯ ರೋಗ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ.
(9) ಇನ್ಕ್ಯಬೇಷನ್ ಪಿರಿಯಡ್ (ರೋಗಪರಿಪಕ್ವ ಆಗುವ ಅವಧಿ):ರೋಗ ಕ್ರಿಮಿಗಳಿಗೆ, ಮನುಷ್ಯನ ಸಂಪರ್ಕ ಬಂದ ಮೇಲೆ, ರೋಗವು ಪ್ರಾರಂಭವಾಗುವುದು.
ಆದರೂ, ಒಮ್ಮೆಲೇ ರೋಗದ ಲಕ್ಷಣಗಳು ಕಂಡುಬರುವುದಿಲ್ಲ.
ರೋಗ ಕ್ರಿಮಿಗಳು ಬೆಳೆಯಲಾರಂಭಿಸುವುವು, ಆ ಕ್ರಿಮಿಗಳು ಸಾಕಾದಷ್ಟು ಪ್ರಬಲವಾದಾಗ ರೋಗವು ಬಲಿತು ಲಕ್ಷಣಗಳು ಹೊರ ಬೀಳುವುವು.
ಇದಕ್ಕೆ ಸ್ವಲ್ಪ ವೈದ್ಯಕೀಯ ಕಾಲಾವಕಾಶವು ಬೇಕು.
ಸೋಂಕು ತಗುಲಿದಂದಿನಿಂದ ರೋಗ ಬಲಿಯುವ ತನಕದ ಅವಧಿಯನ್ನು ಇನ್ಕ್ಯುಬೇಷನ್ ಪೀರಿಯಡ್ ಅಥವಾ ರೋಗ ಪರಿಪಕ್ವ ಆಗುವ ಅವಧಿ ಎನ್ನುತ್ತಾರೆ.
(10) ಐಸೋಲೇಷನ್ (ಪ್ರತ್ಯೇಕ್ಷವಾಗಿ ರೋಗಿಯನ್ನು ಇರಿಸುವುದು):ಸೋಂಕಿರುವ ರೋಗದ ವ್ಯಕ್ತಿಯನ್ನು, ಇತರೆ ಆರೋಗ್ಯವಂತರಿಂದ ಪ್ರತ್ಯೇಕವಾಗಿರಿಸುವುದನ್ನು ಐಸೋಲೇಷನ್ ಎನ್ನುತ್ತಾರೆ.
(11) ಕ್ಯಾರಿಯರ್ (ರೋಗವಾಹಕ):ಹೊರಗಡೆ ರೋಗಲಕ್ಷಣಗಳು ಕಾಣದೆ, ವ್ಯಕ್ತಿ ರೋಗಾಣುಗಳನ್ನು ಹೊಂದಿದ್ದರೆ ಅಥವಾ ಇತರರಿಗೆ, ಸೋಂಕು ಹರಡುವ ಸ್ಥಿತಿಯಲ್ಲಿದ್ದರೆ ಅವರನ್ನು ಕ್ಯಾರಿಯರ್ ಅಥವಾ ರೋಗವಾಹಕ ವ್ಯಕ್ತಿ ಎನ್ನುತ್ತಾರೆ.
(12) ಪೊಮೈಟೆಸ್ (ಸೋಂಕು ಹೀರಕಗಳು):ಅಂಟುರೋಗಿ ಉಪಯೋಗಿಸಿದ ಬಟ್ಟೆಬರೆ, ಪಾತ್ರೆ ಇತ್ಯಾದಿ.
(13) ಇನ್ಫೆಸ್ಟೇಶನ್:ಪರೋಪ ಜೀವಿಗಳಿಗೆ ಸ್ಥಳ ಕೊಡುವಿಕೆ, ಸಂಧಿಪದಿಗಳು ಮನುಷ್ಯನ ಶರೀರ ಅಥವಾ ಪ್ರಾಣಿಗಳು ಅಥವಾ ಬಟ್ಟೆಗಳ ಮೇಲಿರುವುದು.
ಉದಾ :ಸಂಧಿಪದಿಗಳು ಅಥವಾ ಹೆಗ್ಗಣ ಆಶ್ರಯ ಪಡೆಯುವುದು.
(14) ಕಂಟಾಮಿನೇಷನ್ (ಕಲುಷಿತತೆ):ಸೋಂಕುಕಾರಕ (ಏಜೆಂಟ್) ಶರೀರದ ಮೇಲೆ ಅಥವಾ ನಿರ್ಜೀವಿ ವಸ್ತುಗಳ ಮೇಲಿರುವುದು.
ಅಂತಹವುಗಳೆಂದರೆ, ಗೊಂಬೆಗಳು, ಬಟ್ಟೆಗಳು, ಉಪಕರಣಗಳು,ಆಹಾರ, ನೀರು ಇತ್ಯಾದಿ.
(15) ಕ್ವಾರಂಟೈನ್:ಸೋಂಕಿಗೆ ಒಳಗಾಗಿರಬಹುದೆಂಬ ಅನುಮಾನದ ಮೇಲೆ ಪ್ರತ್ಯೇಕಿಸಿಡುವುದು.
(16) ಪ್ಯಾಥೋಜಿನಿಕ್:ರೋಗ ಉಂಟು ಮಾಡುವ .
(17) ಪಾರಾಸೈಟ್:ಇನ್ನೊಂದು ಜೀವಿಯ ಮೇಲೆ ಇದ್ದು ಜೀವಿಸುವ ಪರೋಪಜೀವಿ.
(18) ಹೋಸ್ಟ್ (105):ಯಾರ ಮೇಲೆ ಪರೋಪಜೀವಿಗಳು ಬದುಕುತ್ತವೆಯೋ ಅಂತಹ ಪ್ರಾಣಿ ಅಥವಾ ಮನುಷ್ಯ.
(19) ಡಿಸ್ಇನ್ಪೆಕ್ಷನ್ :ಹಾನಿಕಾರಕ ಸೂಕ್ಷ್ಮಜೀವಿಗಳನ್ನು (ಮಿಣಿಜೀವಿಗಳು) ನಾಶ ಮಾಡುವ ಪ್ರಕ್ರಿಯೆ.
(20) ಡಿಸ್ಇನ್ಫೆಸ್ಟೇತನ್ :ಮನುಷ್ಯನ ಮೇಲೆ ವಾಸಿಸುವ ರೋಗ ಉಂಟುಮಾಡುವ ಕೀಟ ಮುಂತಾದವುಗಳನ್ನು ನಾಶಪಡಿಸುವಿಕೆ.
(21) ಆರ್ತ್ರೊ ಪಾಡ್ಬ್ :ಕೀಟಗಳು, ಜೇಡಗಳು ಮತ್ತು ಅವುಗಳ ಸಂಬಂಧಿಗಳು ಸೇರಿದಂತೆ, ಪ್ರಾಣಿಗಳ ಒಂದು ಗುಂಪು.
(22) ಆ್ಯಂಟೀಸೀರಮ್ :ನಿರ್ದಿಷ್ಟ ಕಾಯಿಲೆಗಳಿಗೆ, ತಾತ್ಕಾಲಿಕ ಪ್ರತಿ ರೋಧಕತೆ ಕೊಡುವಂತಹ ನಿರ್ದಿಷ್ಟ ಸೀರಮ್ಗಳು, ಉದಾಹರಣೆಗೆ ಆ್ಯಂಟೀಡಿಪ್ತೀರಿಯಾ ಸೀರಮ್.
ರೋಗಡ ಹರಡಿಕೆ : ಸೋಂಕಿನ ಮೂಲದಿಂದ ಅನೇಕ ಮಾರ್ಗಗಳ ಮೂಲಕ ಈಡಾಗುವ ಆಶ್ರಯ ಜೀವಿಯಿಂದ ಮನುಷ್ಯನಿಗೆ ಹರಡುತ್ತದೆ.
ರೋಗ ಯಾವ ರೀತಿ ಹರಡಿತು ಎಂಬುದು ತಿಳಿದುಕೊಳ್ಳುವುದರಿಂದ, ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸೂಕ್ತಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ.
1) ಸೋಂಕಿನ ಮೂಲ :ಅನೇಕ ಪ್ರಕರಣಗಳಲ್ಲಿ ಮನುಷ್ಯನೇ ಸೋಂಕಿನ ಮೂಲವಾಗಿರುತ್ತಾನೆ.
ಆತ ರೋಗವಾಹಕ ಅಥವಾ ಕ್ಯಾರಿಯರ್ ಆಗಿರಬಹುದು.
ಕೆಲವೊಮ್ಮೆ ಸೋಂಕಿನಮೂಲ, ಸೋಂಕಿನಿಂದ ಕೂಡಿದ ಪ್ರಾಣಿಯು ಆಗಿರಬಹುದು (ಉದಾ.: ರೇಬಿಸ್(ನಾಯಿಹುಚ್ಚು)ನಲ್ಲಿ ನಾಯಿ)
2) ಹರಡಿಕೆಯ ವಿಧಾನಗಳು :ರೋಗ ಹರಡಿಕೆಯ ವಿಧಾನಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು.
ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ' ಎಂದು.
1. ನೇರವಾಗಿ ಹರಡುವುದು :
(1) ನೇರ ಸಂಪರ್ಕದಿಂದ .
(2) ತುಂತುರು ಸೋಂಕು .
(3) ಸೋಂಕಿನಿಂದ ಕೂಡಿದ ಮಣ್ಣಿನ ಸಂಪರ್ಕ.
(4) ಚುಚ್ಚುವಿಕೆ ಮೂಲಕ ಚರ್ಮ ಅಥವಾ ಲೋಳ್ಪರೆ ಒಳಕ್ಕೆ ಹೋಗಿರುವುದು.
(5) ಮಾಸು ಮೂಲಕ ಹರಡಿರುವುದು ಅಥವಾ ನೆಟ್ಟ ನಿಲುವಿನ ಮೂಲಕ ಹರಡಿರುವುದು.
2. ಪರೋಕ್ಷ ವಾಗಿ ಹರಡುವುದು :
(1) ವಾಹಕಗಳ ಮೂಲಕ ಹರಡಿಕೆ .
(2) ಸೋಂಕು, ಕೀಟಗಳ ಮೂಲಕ ಹರಡಿಕೆ .
(3) ಗಾಳಿ ಮೂಲಕ ಹರಡಿಕೆ.
(4) ರೋಗಿ ಬಳಸಿದ ವಸ್ತುಗಳ ಮೂಲಕ ಹರಡಿಕೆ
1. ನೇರವಾಗಿ ಹರಡುವುದು(1) ನೇರವಾದ ಸಂಪರ್ಕದಿಂದ :ರೋಗಕಾರಕ ನೇರವಾಗಿ, ಸೋಂಕಿನ ವ್ಯಕ್ತಿಯಿಂದ ಈಡಾಗುವ ಆಶ್ರಯದಾತನಿಗೆ, ಶಾರೀರಿಕ ಸಂಪರ್ಕದ ಅವಧಿಯಲ್ಲಿ ಹರಡುತ್ತದೆ.
ಅಂದರೆ,ಸರ್ಶ, ಚುಂಬನ, ಲೈಂಗಿಕ ಸಂಪರ್ಕದಿಂದ ಸೋಂಕು ಹರಡುತ್ತದೆ.
ನೇರವಾದ ಸಂಪರ್ಕದಿಂದ ಲೈಂಗಿಕ ರೋಗಗಳು, ಚರ್ಮ ರೋಗಗಳು, ಕುಷ್ಠ ರೋಗ ಮತ್ತು ಕಣ್ಣಿನ ಸೋಂಕುಗಳು ಹರಡುತ್ತವೆ.
(2) ತುಂತುರು ಮೂಲಕ ಸೋಂಕು :ಯಾವಾಗ ವ್ಯಕ್ತಿ ಕೆಮ್ಮುತ್ತಾನೋ, ಸೀನುತ್ತಾನೋ ಅಥವಾ ಜೋರಾಗಿ ಮಾತನಾಡುತ್ತಾನೋ ಆಗ ಜೊಲ್ಲಿನ ತುಂತುರು ಮತ್ತು ಮೂಗಿನ ಸ್ರಾವಗಳು ವಾತಾವರಣದಲ್ಲಿ ಸೇರುತ್ತವೆ.
ಯಾವುದೇ ವ್ಯಕ್ತಿ ಸೋಂಕಿನ ವಸ್ತುಗಳ ಸಮೀಪವಿದ್ದಾಗ ಅವುಗಳಲ್ಲಿ ಕೆಲವು ಉಸಿರಿನ ಮೂಲಕ ಶರೀರದೊಳಕ್ಕೆ ಸೇರುತ್ತವೆ.
ಉದಾಹರಣೆಗೆ:ನೆಗಡಿ ಇರುವ ವ್ಯಕ್ತಿಯಿಂದ, ಇನ್ಫ್ಲೂಯೆಂಜಾ ಇರುವ ವ್ಯಕ್ತಿಯಿಂದ, ಕ್ಷಯರೋಗ ಹೊಂದಿರುವವನಿಂದ, ದಡಾರ, ಡಿಪ್ತಿರಿಯಾ, ಸೀತಾಳೆ ಸಿಡುಬು, ನಾಯಿಕೆಮ್ಮು ಗದಗಟ್ಟು (ಮಂಪ್ಸ್) ಹೊಂದಿರುವ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ತುಂತುರು,ಮೂಲಕ ರೋಗಾಣುಗಳು ಸಮೀಪವಿರುವ, ಆರೋಗ್ಯವಂತ ವ್ಯಕ್ತಿಗೆ ಹರಡಬಹುದು.
ಜನಸಂದಣಿ ಇರುವ ಜಾಗಗಳಲ್ಲಿ ತುಂತುರು ಮೂಲಕ ರೋಗಹರಡುವ ಸಾಧ್ಯತೆಗಳು ಹೆಚ್ಚು.
(3) ಸೋಂಕಿನ ಮಣ್ಣಿನ ಸಂಪರ್ಕ :ಉದಾ: ಧನುರ್ವಾಯು (ಟೆಟನಸ್).
(4) ಪ್ರಾಣಿ ಕಚ್ಚಿರುವುದು:ಹುಚ್ಚುನಾಯಿ ಕಚ್ಚಿದರೆ ರೇಬಿಸ್ ಬರುತ್ತದೆ.
2. ಪರೋಕ್ಷವಾಗಿ ಹರಡುವಿಕೆ(1) ವಾಹಕಗಳ ಮೂಲಕ ಹರಡುವಿಕೆ :ರೋಗಕಾರಕಗಳ ಮೂಲಕ ರೋಗ ಹರಡುತ್ತದೆ.
ಅವುಗಳೆಂದರೆ,ಅ) ನೀರು ಆ) ಆಹಾರ ಇ) ಹಾಲು ಅಥವಾ ಹಾಲಿನ ಉತ್ಪನ್ನಗಳು ಈ) ಐಸ್ ಉ) ಸೀರಮ್ ಅಥವಾ ಪ್ಲಾಸ್ಮಾ ಅಥವಾ ಇತರೆ ಜೈವಿಕ ಉತ್ಪನ್ನಗಳು.
ಇವುಗಳಲ್ಲೆಲ್ಲಾ ರೋಗ ಹರಡುವುದರಲ್ಲಿ ಕಲುಷಿತಗೊಂಡಂತಹ ನೀರು ಬಹಳ ಮುಖ್ಯವಾದದ್ದು.
ವಾಹಕಗಳ ಮೂಲಕ ಹರಡುವ ರೋಗಗಳೆಂದರೆ,1) ಕಾಲರಾ 2) ಟೈಫ ಫಾಯಿಡ್ ಜ್ವರ 3) ಪೋಲಿಯೋ ಮೈಲೈಟಿಸ್ 4) ವೈರಲ್ ಹೆಪಟೈಟಿಸ್ (ಜಾಂಡೀಸ್) 5) ಪರಾವಲಂಬಿ ಜೀವಿಗಳಿಂದ ಹರಡುವ ಜಂತುಹುಳು ಇತ್ಯಾದಿ.
ರೋಗಿಯು ವಿಸರ್ಜಿಸುವ ಮಲದಿಂದಾಗಿ ನೀರು, ಆಹಾರ ಮೊದಲಾದವು ಕಲುಷಿತಗೊಳ್ಳುತ್ತವೆ.
ಮಲಮೂತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಇರುವುದರಿಂದ, ಮಲ, ನೀರಿನ ಮೂಲಗಳಲ್ಲಿ ಸೇರ್ಪಡೆಗೊಂಡು, ನೀರನ್ನು ಕಲುಷಿತಗೊಳಿಸುವುದರಿ೦ಂದ ರೋಗಗಳು ಹರಡುತ್ತವೆ.
ಆದುದರಿಂದ, ನೀರಿನ ಮೂಲಗಳ ಬಳಿ ಮಲ-ಮೂತ್ರಗಳನ್ನು ವಿಸರ್ಜನೆ ಮಾಡಬಾರದು.
ಕಲುಷಿತಗೊಂಡ ರಕ್ತದ ಮೂಲಕ ವೈರಲ್ ಹೆಪಟೈಟಿಸ್ (ಜಾಂಡೀಸ್),ಮಲೇರಿಯಾ ಹಾಗೂ ಸಿಫಿಲಿಸ್ ಕಾಯಿಲೆಗಳು ಹರಡುತ್ತವೆ.
(2) ರೋಗಿ ಉಪಯೋಗಿಸಿದ ಬಟ್ಟೆಬರೆ, ವಸ್ತುಗಳ ಮೂಲಕ ರೋಗ ಹರಡುವಿಕೆ(ಪೊಮೈಟ್ಸ್ ಮೂಲಕ):ಅಂಟುರೋಗಿ ಉಪಯೋಗಿಸಿದ ಟವೆಲ್ಗಳು, ಬಟ್ಟೆ, ಕರವಸ್ತ್ರ.
ಅಮಿಬಿಯಾಸಿಸ್,ಬ್ಯಾಸಿಲರಿಡೀಸೆಂಟ್ರಿ (ಆಮಶಂಕೆ), ಟೈಫಾಯಿಡ್ ಜ್ವರ, ಶೀತಾಳೆ ಸಿಡುಬು,ಡಿಪ್ತೀರಿಯಾ, ವೈರಲ್ ಹೆಪಟೈಟಿಸ್ (ಜಾಂಡೀಸ್) ಮತ್ತು ಕಣ್ಣಿನ ಸೋಂಕುಗಳು.
3) ಕ್ರಿಮಿ ಕೀಟಗಳ ಮೂಲಕ ರೋಗ ಹರಡುವಿಕೆ:ಸೊಳ್ಳೆಗಳು, ನೊಣಗಳು, ಚಿಗಟಗಳು, ಉಣ್ಣಿಗಳು ತಮ್ಮ ಶರೀರದಲ್ಲಿ ರೋಗಕಾರಕಗಳನ್ನು ಕೊಂಡೊಯ್ಯುತ್ತವೆ.
ಉದಾ: ಮನೆ ನೊಣ ಆಮಶಂಕೆಯ ರೋಗಾಣುಗಳನ್ನು ಕೊಂಡೊಯ್ಯುತ್ತವೆ.
ಅಂಟು ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಾಮಾನ್ಯವಾಗಿತೆಗೆದುಕೊಳ್ಳಬೇಕಾದ ಕ್ರಮಗಳು:
ರೋಗಕಾರಕ (ಏಜೆಂಟ್), ಆಶ್ರಯದಾತ (ಹೋಸ್ಟ್) ಮತ್ತು ಪರಿಸರದಲ್ಲಿ ನಡೆಯುವ ಪ್ರತಿಕ್ರಿಯೆಯ ಫಲಿತಾಂಶದಿಂದ ರೋಗ ಉಂಟಾಗುತ್ತದೆ.
ರೋಗವನ್ನು ತಡೆಗಟ್ಟಲು ಪ್ರತಿಕ್ರಿಯೆ ಉಂಟಾಗುವುದಕ್ಕೆ ಅವಕಾಶವನ್ನು ಕೊಡಬಾರದು.
ಒಮ್ಮೆರೋಗ ಆರಂಭಗೊಂಡರೆ ಆ ರೋಗ, ಮುಂದೆ ಹರಡದಂತೆ, ತಡೆಗಟ್ಟಲುಅಗತ್ಯವಾದ ಸೂಕ್ತ ಕ್ರಮಗಳನ್ನು ತಡಮಾಡದೆ ಕೈಗೊಳ್ಳಬೇಕು.
ಸೋಂಕು ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳೆಂದರೆ:(1) ಸೋಂಕಿನ ಮೂಲವನ್ನು ನಿಯಂತ್ರಿಸುವುದು .
(2)ರೋಗ ಹರಡುವ ಮಾರ್ಗಗಳನ್ನು ಮುಚ್ಚುವುದು .
(3) ಸೋಂಕಾಗುವವರನ್ನು ರಕ್ಷಿಸುವುದು .
ಸೋಂಕಿನ ಮೂಲವನ್ನು ನಿಯಂತ್ರಿಸುವುದು:
ಸೋಂಕಿನ ಸಾಮಾನ್ಯ ಮೂಲಗಳೆಂದರೆ, ಸೋಂಕಿನ ವ್ಯಕ್ತಿಗಳು, ರೋಗ ವಾಹಕ (ಕ್ಯಾರಿಯರ್ಸ್)ರಾಗಿರುತ್ತಾರೆ.
ಸೋಂಕಿನ ಮೂಲವನ್ನು ನಿರ್ಮೂಲನೆ ಮಾಡುವುದರಿಂದ ರೋಗ ಹರಡುವುದನ್ನು ಕಡಿಮೆ ಮಾಡಬಹುದು ಅಥವಾ ನಿಯಂತ್ರಿಸಬಹುದು.
ಮನುಷ್ಯನ ಸೋಂಕಿನ ಮೂಲವನ್ನು ನಿಯಂತ್ರಿಸುವ ಸಾಮಾನ್ಯ ಕ್ರಮಗಳೆಂದರೆ, ಬೇಗನೆ ರೋಗವನ್ನು ಪತ್ತೆ ಮಾಡುವುದು.
ರೋಗದ ಬಗ್ಗೆ ವರದಿ ಮಾಡುವುದು (ನೋಟಿಫಿಕೇಷನ್).
ಸೋಂಕು ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಆರೈಕೆ ಮಾಡುವುದು.
ಚಿಕಿತ್ಸೆಯನ್ನು ಏರ್ಪಡಿಸುವುದು.
ಸರ್ವೇಲೆನ್ಸ್ ಮಾಡುವುದು ಮತ್ತು ಸೋಂಕು ನಾಶ ಮಾಡುವುದು (ಡಿಸ್ಇನ್ಪೆಕ್ಷನ್).
1. (1) ಬೇಗನೆ ರೋಗವನ್ನು ಪತ್ತೆ ಮಾಡುವುದು :ರೋಗದ ಪ್ರಕರಣಗಳನ್ನು ಮತ್ತು ರೋಗ ವಾಹಕರನ್ನು (ಕ್ಯಾರಿಯರ್)ಬೇಗನೆ ಪತ್ತೆ ಮಾಡಿ ಚಿಕಿತ್ಸೆಯನ್ನು ವ್ಯವಸ್ಥೆ ಮಾಡುವುದರಿಂದ, ರೋಗವನ್ನು ನಿಯಂತ್ರಿಸಬಹುದು.
ಪ್ರಯೋಗ ಶಾಲೆಯ ಪರೀಕ್ಷೆಗಳ ಮೂಲಕ ರೋಗದ ಖಚಿತತೆಯನ್ನು ತಿಳಿದುಕೊಳ್ಳಬಹುದು.
(2) ನೋಟಿಫಿಕೇಷನ್ (ವರದಿ ಮಾಡುವುದು) :ಒಮ್ಮೆ ಸೋಂಕು ರೋಗವೆಂದು ನಿರ್ಧರಿಸಿದ ನಂತರ, ಆ ಬಗ್ಗೆ ತಡಮಾಡದೆ, ಸ್ಥಳೀಯ ಆರೋಗ್ಯ ಪ್ರಾಧಿಕಾರಕ್ಕೆ ವರದಿ ಮಾಡುವುದು ಅತ್ಯಗತ್ಯ.
ವರದಿ ಸ್ವೀಕರಿಸಿದ ಆರೋಗ್ಯಾಧಿಕಾರಿಗಳು ಅಗತ್ಯವಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದಲ್ಲದೆ ರೋಗಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ಮಾಡಬೇಕು.
ಆರೋಗ್ಯದ ಬಗ್ಗೆ ಕಾಳಜಿ ಇರುವವರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ, ರೋಗದ ಬಗ್ಗೆ ಸಕಾಲದಲ್ಲಿ ವರದಿಯನ್ನು ಮಾಡಬೇಕು.
(3) ರೋಗಿಯನ್ನು ಪ್ರತ್ಯೇಕವಾಗಿರಿಸುವುದು :ಸಾಮಾನ್ಯ ತತ್ವವೆಂದರೆ, ಸೋಂಕನ್ನು ಹೊಂದಿರುವ ರೋಗಿಯನ್ನುಮನೆಯಲ್ಲಿ ಪ್ರತ್ಯೇಕ 'ಕೊಠಡಿಯಲ್ಲಿರಿಸಬೇಕು.
ಅಥವಾ ಆಸ್ಪತ್ರೆಗೆ ಸೇರಿಸಬೇಕು .
ಪ್ರತ್ಯೇಕವಾಗಿರಿಸುವ ಉದ್ದೇಶ, ಸೋಂಕಿನ ಹರಡುವಿಕೆಯನ್ನು ಮಿತಗೊಳಿಸುವುದೇ ಆಗಿರುತ್ತದೆ.
ಇಂತಹ ರೋಗದವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು.
ಅವುಗಳಂದರೆ, ಡಿಪ್ತೀರಿಯಾ (ಗಂಟಲು.ಡಿ ರೋಗ), ಕಾಲರಾ ಮತ್ತು ಸ್ವೆಪ್ಪೋಕಾಕಲ್- ಶ್ವಾ ಶ್ವಾಸಕೋಶದ ರೋಗಗಳು, ಸೋಲಕಿನ ಅವಧಿಯನ್ನು ಅವಲಂಬಿಸಿ, ರೋಗಿಯನ್ನು ಪ್ರತ್ಯೇಕವಾಗಿರಿಸಲಾಗುವುದು.
(4) ಚಿಕಿತ್ಸೆ :ಯಾವುದೇ ರೋಗವನ್ನು ನಿಯಂತ್ರಿಸಬೇಕಾದರೆ, ಸಮರ್ಪಕ ಚಿಕಿತ್ಸೆ ಅತ್ಯಗತ್ಯ.
ಚಿಕಿತ್ಸೆಯನ್ನು ಕೊಡಿಸುವುದರಿಂದ,ಸೋಂಕು ಹರಡುವುದು ಕಡಿಮೆಯಾಗುತ್ತದೆ.
(5) ಸರ್ವೆಲೆನ್ಸ್ (ನಿಗಾ ಇಡುವುದು):ಸೋಂಕು ಹರಡಿರುವುದರ ಬಗ್ಗೆ ನಿಗಾವಹಿಸಬೇಕು.
ಹೊಸ ಪ್ರಕರಣಗಳ ಬಗ್ಗೆ ಸಂಬಂಧಿಸಿದ ಆರೋಗ್ಯಾಧಿಕಾರಿಗಳಿಗೆ ವರದಿ ಮಾಡಬೇಕು.