ಭಾರತದಲ್ಲಿ ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ .
ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು , ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ.
ಭ್ರಷ್ಟಾಚಾರ ವಿರೋಧಿ ಚಳವಳಿ - ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಐಏಸಿಯ ಮುಖಂಡರು ಮತ್ತು ನಾಗರಿಕ ಸಮಾಜದವರೊಂದಿಗೆ ಸಮಾಲೋಚಿಸಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್ , ನಿವೃತ್ತ ಭಾರತೀಯ ಆರಕ್ಷಕ ಸೇವೆ ( ಐಪಿಎಸ್ ) ಅಧಿಕಾರಿ ಕಿರಣ್ ಬೇಡಿ ,
ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್ .ಸಂತೋಷ್ ಹೆಗ್ಡೆ , ಹಿರಿಯ ವಕೀಲ ಪ್ರಶಾಂತ್ ಭೂಷಣ್ , ಮಾಜಿ ಮುಖ್ಯ ಚುನಾವಣಾಧಿಕಾರಿ ಜೆ .ಎಂ .ಲಿಂಗ್ಡೋ ಅವರು ರಚಿಸಿರುವ ಈ ಮಸೂದೆಯ ಕರಡು , ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರನ್ನು ನೇಮಿಸುವ ಪ್ರಸ್ತಾವನೆಯನ್ನು ಹೊಂದಿದೆ .
ಇದು ಭ್ರಷ್ಟಾಚಾರವನ್ನು ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ಸೂಕ್ತವಾಗಿ ರಕ್ಷಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಮತ್ತು ಮತ್ತು ಅನ್ಯಾಯವನ್ನು ಸರಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ರೂಪಿಸಲಾಗಿದೆ.
ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ವಿಚಾರಮೊರಾರ್ಜಿ ದೇಸಾಯಿಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಮುಂದುವರೆದಿದೆ.
೧೯೬೯ರಲ್ಲಿಯೇ ಮೊದಲ ಬಾರಿಗೆ ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತಾದರೂ , ರಾಜ್ಯಸಭೆಯಲ್ಲಿ ಅದು ಒಪ್ಪಿಗೆ ಪಡೆಯಲಿಲ್ಲ .
ನಂತರ ೧೯೭೧ , ೧೯೭೭ , ೧೯೮೫ , ೧೯೮೯ , ೧೯೯೬ , ೧೯೯೮ , ೨೦೦೧ , ೨೦೦೫ ಮತ್ತು ೨೦೦೮ ರಲ್ಲಿ ಮತ್ತೆ ಮಂಡಿಸಲಾಗಿಯಿತಾದರೂ ಅದು ಅಂಗೀಕಾರವಾಗಿರಲಿಲ್ಲ .
ಅಣ್ಣಾ ಹಜಾರೆಯವರ ನಾಲ್ಕು ದಿನದ ಉಪವಾಸದ ನಂತರ ಪ್ರಧಾನಿ ಮನಮೋಹನ ಸಿಂಗ್ರವರು ೨೦೧೧ರ ಮುಂಗಾರು ಅಧಿವೇಶನದಲ್ಲಿ ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದೆಂದು ಹೇಳಿದರು .