Commit 22ab8764 authored by Narendra VG's avatar Narendra VG

Upload New File

parent 9c9e5008
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ , ಬ್ರಹ್ಮಾಪುರ (ಐಐಎಸ್ಇಆರ್ ಬ್ರಹ್ಮಾಪುರ ) ಭಾರತದ ಒಡಿಶಾದ ಬ್ರಹ್ಮಾಪುರದಲ್ಲಿರುವ ಸಾರ್ವಜನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿದೆ .
ಉನ್ನತ ಪದವಿ ಮತ್ತು ಸ್ನಾತಕೋತ್ತರ ಹಂತದ ಶಿಕ್ಷಣದಲ್ಲಿ ವೈಜ್ಞಾನಿಕ ಕಲಿಕೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲೂ , ಉನ್ನತ ಗುಣಮಟ್ಟದ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರನ್ನು ರಚಿಸುವ ಸಲುವಾಗಿ ಇದನ್ನು ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸ್ಥಾಪಿಸಿತು .
ಐಐಎಸ್ಇಆರ್ ಬ್ರಹ್ಮಾಪುರವನ್ನು ಭಾರತ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಗುರುತಿಸಿದೆ .
ಈ ಸಂಸ್ಥೆಯು ೨೦೧೬ –೧೭ರ ಶೈಕ್ಷಣಿಕ ಸಾಲಿನ ಆಗಸ್ಟ್ ತಿಂಗಳಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು .
ಇದು ಭಾರತದ ೭ ಐಐಎಸ್ಇಆರ್ಗಳಲ್ಲಿ ಒಂದಾಗಿದೆ .
ಮೂಲಭೂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ವಿಭಾಗದಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೦೬ರಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ( ಐಐಎಸ್ಇಆರ್ ) ರಚಿಸಿತು .
ಮೊದಲ ಎರಡು ಸಂಸ್ಥೆಗಳನ್ನು ೨೦೦೬ರಲ್ಲಿ ಪುಣೆ ಮತ್ತು ಕೋಲ್ಕತ್ತಾದಲ್ಲಿ ಪ್ರಾರಂಭಿಸಲಾಯಿತು .
ಇದರ ನಂತರ ಮೊಹಾಲಿ ( ೨೦೦೭ ),ಭೋಪಾಲ್ ಮತ್ತು ತಿರುವನಂತಪುರ ( ೨೦೦೮ ),ತಿರುಪತಿ (೨೦೧೫ ) ಮತ್ತು ಬ್ರಹ್ಮಾಪುರ (೨೦೧೬ ) ಸಂಸ್ಥೆಗಳನ್ನು ಪ್ರಾರಂಭಿಸಲಾಯಿತು .
ಪ್ರತಿ ಐಐಎಸ್ಇಆರ್ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮುಖ್ಯ ಗುರಿಯನ್ನು ಹೊಂದಿರುವ ಸ್ವಾಯತ್ತ ಸಂಸ್ಥೆಗಳಾಗಿವೆ.
ಐಐಎಸ್ಇಆರ್ ಬ್ರಹ್ಮಾಪುರವು ಸರ್ಕಾರಿ ಐಟಿಐ ಬ್ರಹ್ಮಾಪುರದ ಕ್ಯಾಂಪಸ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ .
ಬ್ರಹ್ಮಾಪುರ ಬಳಿಯ ಲಾಡಿಗ್ರಾಮ್‌ನಲ್ಲಿ ಶಾಶ್ವತ ಕ್ಯಾಂಪಸ್ ನಿರ್ಮಾಣ ಹಂತದಲ್ಲಿದೆ .
ಐಐಎಸ್ಇಆರ್ ಬ್ರಹ್ಮಾಪುರ ಆರಂಭದಲ್ಲಿ ಇಂಟಿಗ್ರೇಟೆಡ್ ಬಿಎಸ್ - ಎಂಎಸ್ ಪ್ರೋಗ್ರಾಂ ,ಇಂಟಿಗ್ರೇಟೆಡ್ ಪಿಎಚ್‌ಡಿ ಮತ್ತು ಪಿಎಚ್‌ಡಿ ನೀಡುತ್ತಿದೆ .
ಈ ಕಾರ್ಯಕ್ರಮಕ್ಕೆ ಪ್ರವೇಶವು ಜಂಟಿ ಪ್ರವೇಶ ಕಾರ್ಯಕ್ರಮದ ಮೂಲಕ ಇತರ ಐಐಎಸ್ಇಆರ್‌ಗಳೊಂದಿಗೆ ಸಮನ್ವಯದಲ್ಲಿದೆ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment