Commit 408d239b authored by Narendra VG's avatar Narendra VG

Upload New File

parent cbdf06ae
ಸಾಂಸ್ಥಿಕ ಯೋಜನೆ.
ಪೀಠಿಕೆ :
ಶಿಕ್ಷಣಕ್ಕೆ ಒಂದು ಯೋಜನೆಯು ಅಗತ್ಯ .
ಅಂತೆಯೇ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಿಕ ಯೋಜನೆಗಳ ವ್ಯವಸ್ಥಾ ಕ್ರಮವನ್ನು ಅನುಸರಿಸಿ ಕೊಂಡು ರೂಪಗೊಳ್ಳುತ್ತವೆ.
ಆದರೆ ರಾಷ್ಟ್ರದ ಯೋಜನೆಗಳ ಅನುಷ್ಠಾಣವು ನೇರವಾಗಿ ಕೆಳಹಂತದಲ್ಲಿ ಅನ್ವಯಗೊಳ್ಳುವುದು ಅಸಾದ್ಯ .
ಆದುದರಿಂದಲೇ ಸಾಂಸ್ಥಿಕ ಯೋಜನೆಯು ಈಗ ರುಢಿಗೆ ಬಂದಿದೆ ಇದೊಂದು ಶಿಕ್ಷಣದ ಆವಿಷ್ಕಾರವೂ ಆಗಿದ್ದು ತನ್ನದೆ ಆದ ಪ್ರಾಮುಖ್ಯಾತೆ ಪಡೆದಿದೆ .
ಐತಿಹಾಸಿಕ ಹಿನ್ನಲೆ :
೧೯೬೮ ನವೆಂಬರ್ ೧ ರಂದು ಭೋಪಾಲದಲ್ಲಿ ಸಾಂಸ್ಥಿಕ ಯೋಜನೆಯ ವಿಷಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರೌಡ ವ್ಯಾಸಂಗವೊಂದು ಏರ್ಪಟ್ಟಿತ್ತು .
ಈ ವ್ಯಾಸಂಗದಲ್ಲಿ ತಮ್ಮ ದೀರ್ಘ ಅನುಭವದ ಮಾತುಗಳಿಂದ ಸಾಂಸ್ಥಿಕ ಯೋಜನೆಯ ಬಗೆಗೆ ಮಾತನಾಡಿದ ” ಎಂ.ಬಿ.ಬುಚ್ ” ರವರು ಇದನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ .
” ಸಂಸ್ಥೆಯ ಅಗತ್ಯಗಳಿಗೆ ಅನುಗುಣವಾಗಿ ಉಪಲಬ್ಧವಿರುವ ಮತ್ತು ವ್ಯವಹಾರವನ್ನು ಸುಧಾರಿಸುವ ಮೂಲಕ ಭವಿಷ್ಯದಲ್ಲಿ ಸಂಸ್ಥೆಯ ಅಭಿವೃದ್ದಿಗಾಗಿ ಸಿದ್ದ ಪಡಿಸುವ ಕಾರ್ಯ ಸಮೂಹವೇ ಸಾಂಸ್ಥಿಕ ಯೋಜನೆ ”
ಈ ವಾಕ್ಯವನ್ನು ವಿಶ್ಲೇಷಿಸಿದಾಗ ಈ ಕೆಳಗಿನ ಅಂಶಗಳು ಕಂಡು ಬರುತ್ತವೆ .
೧ .ಸಾಂಸ್ಥಿಕ ಯೋಜನೆಯ ಲಭ್ಯವಿರುವ ಮತ್ತು ಭವಿಷತ್ತಿನಲ್ಲಿ ದೊರೆಯ ಬಹುದಾದ ಸಂಪನ್ಮೂಲಗಳನ್ನು ಆಧರಿಸುತ್ತದೆ .
೨ .ಸಾಂಸ್ಥಿಕ ಯೋಜನೆಯು ಸಂಪೂರ್ಣವಾಗಿ ಅಗತ್ಯಗಳಿಗೆ ಅನುಕೂಲವಾಗಿದೆ .
೩ .ಈ ಯೋಜನೆಯು ಅಲ್ಪ ಕಾಲಿಕ ಅಥವಾ ದೀರ್ಘ ಕಾಲಿಕವೂ ಆಗಿರಬಹುದು .
೪ .ಸಾಂಸ್ಥಿಕ ಯೋಜನೆಯು ಸಿದ್ದ ಪಡಿಸಿದ ಅಭಿವೃದ್ಧಿ ಕಾರ್ಯ ಸಮೂಹಗಳನ್ನು ಒಳಗೊಂಡಿದೆ .
ಸಾಂಸ್ಥಿಕ ಯೋಜನೆಯ ಉದ್ದೇಶಗಳು :
೧ .ಶಾಲಾ ವಿನ್ಯಾಸದಲ್ಲಿ ಸುಧಾರಣೆ ತರುವುದು .
೨ .ಶಾಲೆಯ ಕಾರ್ಯಗಳು ಯೋಗ್ಯ ದಿಕ್ಕಿನಲ್ಲಿ ಸಾಗುವಂತೆ ನಿರ್ದೇಶಿಸುವುದು .
೩ .ಶಾಲೆಯ ಕಾರ್ಯಗಳು ಯೋಗ್ಯವಾಗುವಂತೆ ಯುಕ್ತ ರೀತಿಯಲ್ಲಿ ತೊಡಗಲು ಶಿಕ್ಷಕರಿಗೆ ಸದಾವಕಾಶವನ್ನು ಒದಗಿಸುವುದು .
೪ .ತನಗೆ ಅತಿ ಸುಲಭವಾಗಿ ಲಭ್ಯವಾಗುವ ಎಲ್ಲ ಭೌತಿಕ ಸಂಪನ್ಮೂಲವನ್ನು ಸದ್ವನಿಯೋಗಪಡಿಸಿಕೊಂಡು ಶಿಕ್ಷಣಿಕ ವಯವಸ್ಥೆಯು ತನ್ನೆಲ್ಲ ಪ್ರಸಕ್ತ ನಿಯತಾಂಕಗಳಲ್ಲಿ ಅಭಿವೃದ್ದಿ ಆಗುವಂತಹ ಸರ್ವ ವ್ಯಾಪ್ತಿ ಯೋಜನೆಗಳನ್ನು ತಯಾರಿಸುವುದು .
೫ .ಶಾಲೆಯ ಯೋಜನೆಗಳಲ್ಲಿ ಮತ್ತು ಭೋಧನೆಯನ್ನು ಸುಧಾರಣೆಗಳನ್ನು ತರುವಲ್ಲಿ ಶಿಕ್ಷಕರ ಸ್ವತಂತ್ರ್ಯವನ್ನು ಸಡಿಲಗೊಳಿಸುವುದು .
೬ .ಸಹಪಠ್ಯ ಚಟುವಟಿಗಳ ಸೂಕ್ತ ಸಂಘಟನೆ ಮಾಡುವುದು .
೭ .ಶಿಕ್ಷಣವು ಒಂದು ಬಂಡವಾಳ ಹೂಡಿಕೆ ಎಂಬ ಪರಿಕಲ್ಪನೆಯನ್ನು ಸಧಿತಗೊಳಿಸುವುದು .
ಸಾಂಸ್ಥಿಕ ಯೋಜನೆಯ ಲಕ್ಷಣಗಳು : '
೧ .ಅಗತ್ಯತೆ ಮತ್ತು ಬೇಡಿಕೆಗಳಿಗೆ ಅಡಿಪಾಯವಾಗಿರಬೇಕು .
೨ .ಗುರಿಗಳಿಗೆ ಆಧ್ಯತೆ ನೀಡುವುದು .
೩ .ವಿಧಾನ ಮತ್ತು ತಂತ್ರಗಳಲ್ಲಿ ನಿರ್ಧಿಷ್ಟತೆಯನ್ನು ಹೊಂದಿರುವುದು .
೪ .ಶಾಲೆಯ ಮತ್ತು ಸಮುದಾಯದ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಅವಕಾಶ ನೀಡುವುದು .
೫ .ವ್ಯಕ್ತಿಗಳ ಕಾರ್ಯಗತವಾಗಿರದೆ ವಿಕೇಂದ್ರೀ ಕೃತ ಮತ್ತು ಪ್ರಜಾ ಸತ್ತಾತ್ಮಕ ಸಂವಹನ ಆಗಿರುತ್ತದೆ .
೬ .ಪರಿಸರದಲ್ಲಿ ಆಗುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಸಾಂಸ್ಥಿಕ ಯೋಜನೆಯು ನಿರಂತರವಾಗಿ ಅಭಿವೃದ್ದಿ ಹೊಂದುತ್ತಿರುತ್ತದೆ .
೭ .ನಮ್ಯತೆಯ ಗುಣವನ್ನು ಹೊಂದಿದ ಯೋಜನೆಯಾಗಿದೆ .
೮ .ನಿರ್ಧಿಷ್ಟವಾಗಿ ವಿವಿಧ ವರ್ಷಗಳ ಯೋಜನೆಯ ಜಯಾ ಪಜಯಗಳನ್ನು ಮೌಲ್ಯ ಮಾಪನ ಮಾಡುವುದು ಮತ್ತು ಪರಿವರ್ತನೆ ತಂದುಕೊಳ್ಳುವುದು .
ಸಾಂಸ್ಥಿಕ ಯೋಜನೆಯ ವ್ಯಾಪ್ತಿ :
೧ .ಶಾಲಾಸ್ಥವರ ಸುಧಾರಣೆ :
ಶುಧ್ದವಾದ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ , ಉಪಹಾರ ಮತ್ತು ಆರೋಗ್ಯ ಸೇವೆ ಒದಗಿಸುವುದು , ಪಾಠೋಪಕರಣಗಳ ವ್ಯವಸ್ಥೆ .
ಆಕರ್ಷಕ ಕಟ್ಟಡ ವಿನ್ಯಾಸ , ಆಟೋಪಕರಣಗಳು ಮತ್ತು ಆಟದ ಬಯಲು .
೨ .ಭೋಧನಾತ್ಮಕ ಸುಧಾರಣೆ :
ಭೋಧನೆಗೆ ಸಂಬಂಧಿಸಿದ ಚರ್ಚೆ , ಕ್ರಿಯಾ ಸಂಶೋಧನೆಯ ವಿನಿಮೆಯ , ವಿಶೇಷ ಉಪನ್ಯಾಸ ಮಾಲಿಕ , ವೃತ್ತಿ ನಿರತ ತರಬೇತಿಗಳಿಗೆ ಶಿಕ್ಷಕರನ್ನು ಕಳಿಸುವುದು .
ಪುನಶ್ಚೇತನ ಶಿಬಿರಗಳ ಮತ್ತು ರಜಾ ತರಬೇತಿಗಳು
೩ .ಸಹಪಠ್ಯ ಚಟುವಟಿಕೆಗಳು :
ವಿದ್ಯಾರ್ಥಿ ಒಕ್ಕೂಟ ರಚನೆ , ಸಾಂಸ್ಕೃತಿಕ ಚಟುವಟಿಕೆಗಳು ಸಮಾಜ ಸೇವೆ , ಶೈಕ್ಷಣಿಕ ಪ್ರವಾಸ , ವನ ಭೋಜನಕೂಟ ಹಾಗೂ ಕ್ರಿಡೆಗಳು ಇತ್ಯಾದಿ .
೪ .ಸುಧಾರಿತ ಆಡಳಿತಾತ್ಮಕ ಯೋಜನೆಗಳನ್ನು ರೂಪಿಸುವಿಕೆ :
ಸಾಂಸ್ಥಿಕ ಯೋಜನೆಯ ಹಂತಗಳು.
೧ .ವರ್ತಮಾನ ಸ್ಥಿತಿಯನ್ನು ವಿಶ್ಲೇಷಿಸುವುದು .
೨ .ಸಂಪನ್ಮೂಲಗಳನ್ನು ನಿರೀಕ್ಷಿಸುವುದು .
೩ .ಸುಧಾರಣೆಯ ಕಾರ್ಯಕ್ರಮಗಳನ್ನು ತಯಾರಿಸುವುದು .
೪ .ಯೋಜನೆಯನ್ನು ಮೌಲ್ಯಮಾಪನವನ್ನು ಮಾಡುವುದು .
ಸಾಂಸ್ಥಿಕ ಯೋಜನೆಯ ಒಳಗೂಂಡಿರುವ ಕಾರ್ಯಕ್ರಮಗಳು :
೧ .ವಿದ್ಯಾರ್ಥಿಗಳ ಪ್ರವೇಶ ಮತ್ತು ವರ್ಗವಿಂಗಡಣೆ .
೨ .ಭೋಧನಾ ಕಾರ್ಯವನ್ನು ಹಂಚಿಕೊಡುವದು , ವಿಷಯಗಳು ವಿತರಣೆ .
೩ .ವೇಳಾ ಪತ್ರಿಕೆಯ ತಯಾರಿಕೆ .
೪ .ಸಹಪಠ್ಯ ಮತ್ತು ಪಠ್ಯೇತರ ವೇಳಾಪಟ್ಟಿ ತಯಾರಿಸುವುದು .
೫ .ವಾರದ ಪರೀಕ್ಷಣಗಳು , ಮಾಸಿಕ ಪರಿಕ್ಷೆಗಳು , ಪೂರ್ವತಯಾರಿ ಪರೀಕ್ಷೆಗಳನ್ನು ನಡೆಸುವುದು .
೬ .ಫಲಿತಾಂಶ ಪ್ರಕಟನೆ ಮತ್ತು ಪ್ರಗತಿ ಪತ್ರಿಕೆಗಳನ್ನು ಚರ್ಚಿಸುವುದು .
೭ .ಪಾಲಕ - ಭೋಧಕರ ಸಭೆ ಮತ್ತು ಇತರ ಸಭೆಗಳು.
೮ .ದಾಖಲಾತಿಗಳ ನಿರ್ವಹಣೆ .
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment