ಇದು ಒಂದು ದ್ಯುತಿವಿದ್ಯುಜ್ಜನಕ ಶಕ್ತಿ ಕೇಂದ್ರವಾಗಿದ್ದು ಸುಮಾರು ೨೫೦೦ ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿದೆ .
ಈ ಸೌರಶಕ್ತಿ ಕೇಂದ್ರವು ಭಾರತ ದೇಶದ ಒಂದು ರಾಜ್ಯವಾದ ತಮಿಳುನಾಡಿನ ರಾಮನಾಥಪುರಂ ಎನ್ನುವ ಜಿಲ್ಲೆಯ ಕಾಮುತಿ ಎಂಬ ಸ್ಥಳದಲ್ಲಿದೆ .
ಯೋಜನೆಯನ್ನು ಅದಾನಿ ಪವರ್ ಎನ್ನುವ ಕಂಪನಿಯೊಂದು ನಿಯೋಜಿಸಿದೆ .
ಈ ಸೌರಶಕ್ತಿ ಕೇಂದ್ರ ಒಂದೇ ಸ್ಥಳದಲ್ಲಿ ಸುಮಾರು 648 ಮೆಗಾವ್ಯಾಟ್ನಷ್ಟು ಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ .
ಇದು ಜಗತ್ತಿನಲ್ಲೆ ೧೨ನೇ ಅತಿದೊಡ್ಡ ಸೌರ ಉದ್ಯಾನವನ ಎನಿಸಿಕೊಂಡಿದೆ .2,500 acres ( 10 km2 )
ABB ಯು ೫ ಉಪಘಟಕವನ್ನು ದಿನಾಂಕ 13 ಜೂನ್ 2016 ರಂದು ಈ ಸೌರವಿದ್ಯುತ್ ಉದ್ಯಾನವನ ನ್ಯಾಷನಲ್ ಗ್ರಿಡ್ ನೊಂದಿಗೆ ಸೇರಿಸಲು ನಿಯೋಜಿಸಿತ್ತು .
ಕಾಮುತಿಯ ಸೌರವಿದ್ಯುತ್ ಯೋಜನೆಯ ಕಾರ್ಯವು 21 ಸೆಪ್ಟೆಂಬರ್ 2016 ರಂದು ಮುಕ್ತಾಯಗೊಂಡಿತು .
ಇದರ ಕಾರ್ಯ ವೆಚ್ಚಕ್ಕೆ ಸುಮಾರು 4550 ಕೋಟಿ ರೂಪಾಯಿ ತಗುಲಿದೆ ಅಂದರೆ ಸುಮಾರು 740ಮಿಲಿಯನ್ ಅಮೆರಿಕನ್ ಡಾಲರ್ನಷ್ಟು .
ಈ ಸೌರ ಸ್ಥಾವರವು 2.5 ಮಿಲಿಯನ್ ಸೌರ ಮಾಡ್ಯೂಲ್‌ಗಳು , 380,000 ಅಡಿಪಾಯಗಳು , 27,000 ಮೀಟರ್ ರಚನೆಗಳು , 576 ಇನ್ವರ್ಟರ್‌ಗಳು , 154 ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಸುಮಾರು 6,000ಕೀ ಮೀ ನಷ್ಟು ಕೇಬಲ್ ಗಳನ್ನು ಒಳಗೊಂಡಿದೆ .
ಸೌರ ರಚನೆಯನ್ನು ನಿರ್ಮಿಸಲು ಸುಮಾರು 30 , 0000 ಟನ್ ಗಳಷ್ಟು ಗ್ಯಾಲ್ವನಿಸೀಡ್ (galavanised) ಉಕ್ಕನ್ನು ಉಪಯೋಗಿಸಲಾಗಿದೆ .
ಸುಮಾರು 8500 ಕೆಲಸಗಾರರು ಸರಾಸರಿ ಹನ್ನೊಂದು ಮೆಗಾವ್ಯಾಟ ನಂತೆ ಪ್ರತಿದಿನದಂತೆ ಮಾಡೆಲ್ ಗಳನ್ನು ತಯಾರಿಸಿ 8 ತಿಂಗಳಲ್ಲಿ ಈ ಯೋಜನೆಯ ಕಾರ್ಯವನ್ನು ಮುಗಿಸಿದರು .
ಉದ್ಯಾನವನ್ನು ನ್ಯಾಷನಲ್ ಗ್ರಿಡ್‌ನೊಂದಿಗೆ ಸಂಪರ್ಕಿಸಲು ಐದು ಉಪಕೇಂದ್ರಗಳನ್ನು ನಿಯೋಜಿಸಿತು .
Kamuthi ಸೌರ ವಿದ್ಯುತ್ ಯೋಜನೆ ಸುಮಾರು ₹ 4,550 ಕೋಟಿ ಹೂಡಿಕೆ ಸೆಪ್ಟೆಂಬರ್ 21 2016 ರಂದು ಪೂರ್ಣಗೊಂಡಿತು .ಮಿಲಿ
ಕೇಬಲ್ಗಳ ಕಿ.ಮೀ . ಸೌರ ಫಲಕಗಳನ್ನು ಆರೋಹಿಸಲು ಬೇಕಾದ ರಚನೆಗಳ ನಿರ್ಮಾಣಕ್ಕೆ 30,000 ಟನ್ ಕಲಾಯಿ ಉಕ್ಕಿನ ಅಗತ್ಯವಿದೆ .
8 ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು 8,500 ಕಾರ್ಮಿಕರು ದಿನಕ್ಕೆ ಸರಾಸರಿ 11 ಮೆಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಿದ್ದಾರೆ .
ಈ ಸಂಪೂರ್ಣ ಸೌರ ಉದ್ಯಾನವನವು ತಮಿಳುನಾಡು ರಾಜ್ಯದ ಪ್ರಸಾರದ ನಿಗಮದ 400kv ಉಪ ಘಟಕಗಳಿಗೆ ಹೊಂದಿಕೊಂಡಿದೆ .
ಈ ಸೌರ ವಿದ್ಯುತ್ ಸ್ಥಾವರವನ್ನು ಸ್ವಯಂಚಾಲಿತ ಯಂತ್ರಗಳು ಸ್ವಚ್ಛಗೊಳಿಸುತ್ತದೆ .
ಈ ಸೌರ ವಿದ್ಯುತ್ ಸ್ಥಾವರವು ಸುಮಾರು ಗಂಟೆಗೆ 2100KW ನಷ್ಟು ಸಂಪನ್ಮೂಲವನ್ನು ನೀಡುತ್ತದೆ .
ಹಾಗೂ ವರ್ಷಕ್ಕೆ 1.35 TW ನಷ್ಟು ಸೌರ ಶಕ್ತಿಯನ್ನು ನೀಡುತ್ತದೆ.ಈ ಸೌರ ವಿದ್ಯುತ್ ಶಕ್ತಿ ಕೇಂದ್ರವು ಒಟ್ಟು ವರ್ಷದ ಸೌರಶಕ್ತಿಯ 24 % ಸೌರಶಕ್ತಿಯನ್ನು ಉತ್ಪತ್ತಿಮಾಡುತ್ತದೆ .