ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗು ತರಬೇತಿ ಸಂಸ್ಥೆ ( NCERT ) ಯು ತನ್ನ ವಿಜ್ಞಾನ ಶಿಕ್ಷಣ ವಿಭಾಗ ಹಾಗು ರಾಜ್ಯಗಳ ಶಿಕ್ಷ್ಹಣ ನಿರ್ದೇಶಕರ ಸಹಕಾರದೊಂದಿಗೆ ಪ್ರೌಢ ಶಾಲಾ ಹಂತದಲ್ಲಿ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಲು ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೆಷಣಾ ಯೋಜನೆಯನ್ನು ೧೯೬೩ರಲ್ಲಿ ರೂಪಿಸಿದರು .
ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಒಲವು ೧೨ + ನಿಂದ ೧೪ ವಯಸ್ಸಿನಲ್ಲಿ ಪ್ರಾರಂಭವಾಗಿ ೧೬ + ನಿಂದ ೧೮ ವಯಸ್ಸಿಗೆ ಪಕ್ವತೆಯನ್ನು ಹೊಂದುತ್ತದೆಂದು ನಂಬಲಾಗಿದೆ .
ಆಯ್ದ ಒರೆಗಳಿಂದ ರಾಷ್ಟ್ರಾದ್ಯಂತ ಮಕ್ಕಳನ್ನು ಪರೀಕ್ಷ್ಹಿ ಸಿ ವರ್ಷಕ್ಕೆ ೩೫೦ ವಿದ್ಯಾರ್ಥಿಗಲಳನ್ನು ಆಯ್ಕೆ ಮಾಡಲಾಗುವುದು ಹಾಗು ಅವರಿಗೆ ಮುಂದಿನ ಅಭ್ಯಾಸಕ್ಕಾಗಿ ೩ ವರ್ಷಗಳವರೆಗೆ ವಿದ್ಯಾರ್ಥಿವೇತನೆಗಲನ್ನು ಮೊದಲು ಕೊಡಲಾಗುತಿತ್ತು .
ಮುಂದೆ ಈ ಸೌಲಭ್ಯವನ್ನು ೯ ವರ್ಷಗಳವರೆಗೆ ವಿಸ್ತರಿಸಲಾಯ್ತು .
ಪಿಎಚ್.ಡಿ ವರೆಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಯ್ತು .
ಅವರ ಹೆಸರುಗಳನ್ನು ವಿಜ್ಞಾನಿಗಳ ಯಾದಿಯಲ್ಲಿ ಪಟ್ಟಿಮಾಡಿ , ಅವರಿಗೆ ಆಡಳಿತಾತ್ಮಕ ನೌಕರಿಗಳನ್ನು ಕೊಡಲಾಗುತ್ತಿದೆ .
ಅಲ್ಲದೆ ಉದ್ಯಮಿಗಳು ಯೋಜನೆ ಹಾಗು ಸಂಶೋಧನಾ ಸಂಸ್ಥೆಗಳಲ್ಲಿ ಅವರಿಗೆ ನೌಕರಿಯ ಅವಕಾಶವಿದೆ .
೧೯೭೨ರಿಂದ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಶೆಯನ್ನು ನಡೆಸಲಾಗುತ್ತದೆ .
ವಿಜ್ಞಾನದ ಬಗ್ಗೆ ವಿಶೇಷ ಒಲವುಗಳ ವಿದ್ಯಾರ್ಥಿಗಳನ್ನು ಶಾಲಾ ಹಂತದ ಕೊನೆಗೆ ಆಯ್ಕೆ ಮಾಡಲಾಗುವುದು .
ಸ್ಪರ್ಧೆಯ ಮೂಲಕ ಗುಣವನ್ನು ಗುರುತಿಸಿ ವೈಜ್ಞಾನಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು .
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನೆಯನ್ನು ನೀಡಿ ಮೂಲ ವಿಜ್ಞಾನದ ಅಭ್ಯಾಸಕ್ಕೆ ನೆರವಾಗುವುದು .
ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸಲು ವಿಜ್ಞಾನದಲ್ಲಿ ವಿಶೇಷ ಕಾರ್ಯಕ್ರಮಗಲನ್ನು ಒದಗಿಸುವುದು .
ವಿಜ್ಞಾನದ ಅಭ್ಯಾಸ ಪತ್ರಿಕೆಯ ಸುಧಾರಣೆ , ಬೋಧನಾ ವಿಧಾನ ಹಾಗು ಮೌಲ್ಯಮಾಪನ ತಂತ್ರಗಳಲ್ಲಿ ಸುಧಾರಣೆ ತರುವುದು .
ವಿಶ್ವವಿದ್ಯಾಲಯ , ಕಾಲೇಜುಗಳು ಹಾಗು ಸಂಶೋಧನಾ ಸಂಸ್ಥೆಗಳಿಗೆ ಅರ್ಹ ವಿದ್ಯಾರ್ಥಿಗಳು ಪ್ರವೇಶಿಸಲು ಪ್ರೋತ್ಸಾಹಿಸುವುದು.
ಹಿಂದಿನ ಪರೆಕ್ಷೆಯಲ್ಲಿ ೫೫ % ಅಂಕಗಳನ್ನು ಪಡೆದ ವಿದ್ಯರ್ಥಿಗಳು ಮಾತ್ರ ಈ ಪರೀಕ್ಷೆಗೆ ಅರ್ಹರು .
ಈ ಪರೀಕ್ಷೆಗೆ ಕೂರಲು ಒಂದೇ ಒಂದು ಅವಕಾಶ ಕೊಡಲಾಗುವುದು .
ಈ ಕೆಳಗಿನ ವಿದ್ಯಾರ್ಥಿಗಳು ಅರ್ಹರು : ಉನ್ನತ ಪ್ರೌಢ ಶಾಲೆಯ ಕೊನೆಯ ವರ್ಷ.
ವಿವಿದೋದ್ದೇಶ ಕೋರ್ಸು.
ಇಂಟರ್ಮೀದಡಿಯೆಟ್ ಮೊದಲ ವರ್ಷ ಪಿ .ಯು .ಸಿ . ಅಥವಾ ತತ್ಸಮ ಪದವಿ ಪೂರ್ವದ ಎರಡನೇ ವರ್ಷ ( ಕೇರಳದಲ್ಲಿದ್ದಂತೆ ).
ಭಾರತೀಯ ಶಾಲಾ ಸರ್ಟಿಫ಼ಿಕೇಟ್ ಪರೀಕ್ಷೆಯ ಎರಡನೇ ವರ್ಷ.
ವಿಜ್ಞಾನದ ಒಲವಿನ ಪರೀಕ್ಷೆ ಒಂದು ಪ್ರಬಂಧ ರೀತಿಯ ಪರೀಕ್ಷೆ.
ವಿಜ್ಞಾನ ವಿಶಯದ ಮೇಲೆ ಒಂದು ಯೋಜನಾ ವರದಿ.
ಒರೆಗಳಲ್ಲಿ ಅರ್ಹರಾದವರಿಗೆ ಮಾತ್ರ ಸಂದರ್ಶನಇದು ವಿದ್ಯಾರ್ಥಿಗಳ ಪ್ರಗತಿಯ ಕರಾರಿಗೊಳಪಟ್ಟಿದೆ .
ಈ ವಿದ್ಯಾರ್ಥಿಗಳಿಗೆ ಪರಿಣತ ಶಿಕ್ಷಕರು ಹಾಗು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು .