Commit a8d1db1b authored by Narendra VG's avatar Narendra VG

Upload New File

parent 642d02f9
ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು .
ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ ಭಾರತ ಸರ್ಕಾರ ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ .
ಈ ಹಿಂದೆ ಇದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಹೊಸ ಅವತರಣಿಕೆಯೇ ಈ ಯೋಜನೆಯಾಗಿದೆ .
ಈ ಯೋಜನೆಯ ಮೂಲಭೂತ ಉದ್ದೇಶಗಳೆಂದರೆ ,ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಒದಗಿಸುವುದು .
ಸ್ಥಳೀಯ ಎಲೆಕ್ಟ್ರಿಕ್ ಗ್ರಿಡ್ ಮಟ್ಟದಲ್ಲಿ ಫೀಡರ್ ಗಳನ್ನೂ ಬೇರ್ಪಡಿಸುವುದು .
ಆ ಮೂಲಕ ಇತರೇ ಬಳಕೆದಾರರಿಗೂ ಹಾಗು ರೈತರಿಗೂ ಸರಬರಾಜು ಆಗುವ ವಿದ್ಯುತ್ ಮೇಲೆ ನಿಗಾ ಹಾಗು ರೈತರಿಗೆ ೨೪ ಗಂಟೆ ವಿದ್ಯುತ್ ಸೌಲಭ್ಯ .
ವಿದ್ಯುತ್ ಸರಬರಾಜು ಮಾಡುವ ಜಾಲ ಹಾಗು ವಿತರಣಾ ಮಂಡಲಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟವನ್ನು ಹಾಗು ಸ್ಥಿರತೆಯನ್ನು ಕಾಯ್ದುಕೊಳ್ಳುವುದು .
ಮಾಪಕಗಳ ಬಳಕೆಯ ಮುಖೇನ ವಿದ್ಯುತ್ ನಷ್ಟವನ್ನು ತಡೆಗಟ್ಟುವುದು .
ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಲಭ್ಯವಾಗುವುದು .
ಕೃಷಿಗೆ ಖರ್ಚಾಗುವ ವಿದ್ಯುತ್ ಮೇಲೆ ನಿಗಾ , ಇದರಿಂದ ಕೃಷಿ ಸಂಬಂಧಿತ ವಿದ್ಯುತ್ ಗೆ ವಿಶೇಷ ಪ್ಯಾಕೇಜ್ ಗಳನ್ನೂ ಘೋಷಿಸುವ ಸಂಧರ್ಭದಲ್ಲಿ ಅನುಕೂಲ .
ಸುಧಾರಿತ ವಿದ್ಯುತ್ ಸರಬರಾಜು .
ವಿದ್ಯುತ್ ಪೋಲು ತಡೆಯಲು ಅನುಕೂಲ.ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಪ್ರಧಾನಮಂತ್ರಿಗಳ ಕಚೇರಿಯ ಅಧೀಕೃತ ಪುಟ.
ಗ್ರಾಮೀಣ ವಿದ್ಯುದೀಕರಣ ಕುರಿತಾದ ಒನ್ ಇಂಡಿಯಾ ಸುದ್ದಿ ತಾಣದ ಕನ್ನಡ ಯೂಟ್ಯೂಬ್ ವಿಡಿಯೋ.
ವಿದ್ಯುದೀಕರಣ ಯೋಜನೆಯ ಪ್ರಸ್ತಾವನೆಯ ಕುರಿತು ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಸುದ್ದಿ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment