Commit ad69df45 authored by Narendra VG's avatar Narendra VG

Upload New File

parent 1270f3db
ಇದು ಭಾರತದ ಒಂದು ಕೇಂದ್ರೀಯ ಸಂಸ್ಥೆಯಾಗಿದ್ದು ಸಾರ್ವಜನಿಕ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಿ ಲೋಕ ಸೇವಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗುವ ಅಧಿಕಾರವನ್ನು ಹೊಂದಿದೆ .
ಭಾರತೀಯ ನಾಗರೀಕ ಸೇವಾ ಪರೀಕ್ಷೆ , ಇಂಜಿನಿಯರಿಂಗ್ ಸೇವಾ ಪರೀಕ್ಷೆ , ಕಂಬೈನ್ಡ್ ಡಿಫೆನ್ಸ್ ಸೇವಗಳ ಪರೀಕ್ಷೆ , ರಾಷ್ಟ್ರೀಯ ಸೇನಾ ಅಕಾಡೆಮಿ ಪರೀಕ್ಷೆ , ಜಲ ಸೇನಾ ಅಕಾಡೆಮಿ ಪರೀಕ್ಷೆ , ಭಾರತೀಯ ಅರಣ್ಯ ಸೇವೆ ಪರೀಕ್ಷೆ , ಭಾರತೀಯ ಅರ್ಥ ಸೇವೆ ಪರೀಕ್ಷೆ , ಭಾರತೀಯ ಸಂಖ್ಯಾ ಸೇವೆ ಪರೀಕ್ಷೆ , ಸಂಯೋಜಿತ ಭೂಗರ್ಭವಿಜ್ಞಾನ ಹಾಗು ಭೂಗರ್ಭ ತಜ್ಞರ ಪರೀಕ್ಷೆ ಹಾಗು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಗಳನ್ನು ಕೇಂದ್ರ ಲೋಕ ಸೇವಾ ಆಯೋಗವು ಕಾಲ ಕಾಲಕ್ಕೆ ತಕ್ಕಂತೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ .
ಪರೀಕ್ಷೆಗಳು ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯ , ಭೌದ್ದಿಕ ಸಾಮರ್ಥ್ಯಗಳನ್ನು ಅಳೆಯುವ ಬಹು ಮುಖ್ಯ ಸಾಧನಗಳಾಗಿರುತ್ತವೆ .
ಸೇನೆ , ಹಾಗು ಪೊಲೀಸ್ ಸೇವೆಗಳಂತಹ ಸೇವೆಗಳಿಗಾಗಿ ಅಭ್ಯರ್ಥಿಗಳು ಹಾಜರಾದರೆ ಅಂತಹ ಅಭ್ಯರ್ಥಿಗಳಿಗೆ ಮಾನಸಿಕ ಹಾಗು ಭೌದ್ಧಿಕ ಸಾಮರ್ಥ್ಯದ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಪರೀಕ್ಷಿಸಲಾಗುತ್ತದೆ .
ದೇಶದಾದ್ಯಂತ ನಾಗರೀಕ ಸೇವೆಗಳಿಗೆ ಪರೀಕ್ಷೆಗಳನ್ನು ನಡೆಸಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರ ಸಂವಿಧಾನದಲ್ಲೇ ಪ್ರಸ್ತಾಪವಾಗಿದೆ .
ಸಂವಿಧಾನದ ಹದಿನಾಲ್ಕನೇ ವಿಭಾಗದ ಆರ್ಟಿಕಲ್ ೩೧೫ ರಿಂದ ೩೨೩ ರವರೆವಿಗೆ ' ಕೇಂದ್ರ ಹಾಗು ರಾಜ್ಯಗಳಡಿಯ ಸೇವೆಗಳು ' ಎಂಬ ತಲೆಬರಹದಡಿಯಲ್ಲಿ ನಾಗರೀಕ ಹುದ್ದೆಗಳಿಗೆ ಕೇಂದ್ರ ಹಾಗು ರಾಜ್ಯಸರ್ಕಾರಗಳು ವ್ಯವಸ್ಥಿತ ಆಯೋಗವನ್ನು ಹೊಂದಬೇಕೆನ್ನುವುದು ನಮೂದಾಗಿದೆ .
ಇದುವರೆವಿಗೂ ನಡೆದಿರುವ ಕೇಂದ್ರೀಯ ಲೋಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಸಫಲತಾ ಪ್ರಮಾಣ ೦.೧ % ದಿಂದ ೦.೩ % ಇದೆ .
ಆಯೋಗವು ಒಬ್ಬ ಮುಖ್ಯಸ್ಥರನ್ನು (ಛೇರ್ಮನ್ ) ಹಾಗು ಹತ್ತು ಜನ ಸದಸ್ಯರನ್ನು ಹೊಂದಿರುತ್ತದೆ .
ಸದರಿ ಆಯೋಗದ ಮುಖ್ಯಸ್ಥರ ಹಾಗು ಸದಸ್ಯರುಗಳ ವಾಯಿದೆ ಹಾಗು ಇತರ ವಿಚಾರಗಳು ' ಕೇಂದ್ರ ಲೋಕ ಸೇವಾ ಆಯೋಗ (ಸದಸ್ಯರುಗಳು ) ಕಾಯ್ದೆ , ೧೯೬೯ ' ರಿಂದ ತಿಳಿದು ಬರುತ್ತದೆ .
ಹತ್ತು ಸದಸ್ಯರನ್ನು ಸೇರಿ ಮುಖ್ಯಸ್ಥರನ್ನು ನೇರವಾಗಿ ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ .
ಕನಿಷ್ಠ ಅರ್ಧದಷ್ಟು ಸಂಖ್ಯೆ ಸದಸ್ಯರಾದರೂ ನಾಗರೀಕ ಸೇವೆಗಳಲ್ಲಿ ಹತ್ತು ವರ್ಷಗಳಷ್ಟಾದರೂ ಅನುಭವ ರಾಜ್ಯ ಅಥವಾ ಕೇಂದ್ರ ಸ್ವಾಮ್ಯದಲ್ಲಿ ಹೊಂದಿರುವರಾಗಿರಬೇಕು .
ಆಯೋಗವು ಕಾರ್ಯದರ್ಶಿಗಳನ್ನು ಹೊಂದಿದ್ದು ಮುಖ್ಯ ಕಾರ್ಯದರ್ಶಿಯಾಗಿ ಒಬ್ಬರು ನೇಮಕಗೊಳ್ಳುತ್ತಾರೆ ಹಾಗು ಅವರಿಗೆ ಇಬ್ಬರು ಹೆಚ್ಚುವರಿ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತದೆ .
ಇದರ ಜೊತೆಗೆ ಜಂಟಿ ಕಾರ್ಯದರ್ಶಿಗಳು , ಉಪ ಕಾರ್ಯದರ್ಶಿಗಳು ಹಾಗು ಇತರ ಸಿಬ್ಬಂದಿ ವರ್ಗವು ಇರುತ್ತದೆ .
ಯೋಗದ ಎಲ್ಲಾ ಸದಸ್ಯರು ಆರು ವರ್ಷಗಳ ಅಧಿಕಾರ ವಾಯಿದೆ ಹೊಂದಿರುತ್ತಾರೆ ಅಥವಾ ಆ ಸದಸ್ಯರಿಗೆ ೬೫ ವರ್ಷ ತುಂಬುವವರೆಗೆ ಅಧಿಕಾರ ವಾಯೆಯಿದೆ ಹೊಂದಿರುತ್ತಾರೆ .
ಇವೆರಡರಲ್ಲಿ ಯಾವುದು ಮೊದಲಾಗುತ್ತದೋ ಅಂತೆಯೇ ಸದಸ್ಯರ ವಾಯಿದೆ ಪೂರ್ಣವಾಗುತ್ತದೆ .
ಆಯೋಗದ ಯಾವುದೇ ಸದಸ್ಯನು ಕೂಡ ತನ್ನ ಇಚ್ಛೆಯಂತೆ ರಾಜೀನಾಮೆಯನ್ನು ನೇರವಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಬಹುದು .
ರಾಷ್ಟ್ರಪತಿಗಳು ಕೂಡ ಯಾವುದೇ ಸದಸ್ಯನನ್ನು ಈ ಕೆಳಕಂಡ ಕಾರಣಗಳನ್ನು ನೀಡಿ ಸೇವೆಯಿಂದ ವಜಾಗೊಳಿಸಬಹುದು
ಸದರಿ ಸದಸ್ಯನ ಯಾವುದಾದರೂ ದುರ್ನಡತೆ ಸುಪ್ರೀಂ ಕೋರ್ಟ್ ನಲ್ಲಿ ಮಾನ್ಯವಾದಾಗ
ಆಯೋಗದ ಯಾವುದೇ ನೀತಿ ನಿಯಮಗಳಿಗೆ ಭಂಗವುಂಟು ಮಾಡಿದ್ದು ಸಾಬೀತಾದಾಗ .
ಆಯೋಗದಲ್ಲಿ ಸದಸ್ಯನಾಗಿದ್ದ ಕಾಲದಲ್ಲಿಯೇ ಇನ್ನಿತರ ಹಣಗಳಿಸುವ ಯಾವುದೇ ಉದ್ಯೋಗದಲ್ಲಿ ತೊಡಗಿಕೊಂಡಾಗ .
ರಾಷ್ಟ್ರಪತಿಗಳ ದೃಷ್ಟಿಯಲ್ಲಿ ಸದಸ್ಯ ದೈಹಿಕ ಅಥವಾ ಮಾನಸಿಕ ಸ್ತೀಮಿತತೆ ಕಳೆದುಕೊಂಡು ತನ್ನ ಕಾರ್ಯವನ್ನು ನಿಭಾಯಿಸಲು ಅಸಮರ್ಥನಾದಾಗ.
ಕೇಂದ್ರ ಲೋಕ ಸೇವಾ ಆಯೋಗ ಕೇಂದ್ರದಲ್ಲಿ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸುವ ಒಂದು ಅಂಗಸಂಸ್ಥೆಯಾಗಿದ್ದು ದೇಶದ ಉನ್ನತ ನ್ಯಾಯಾಂಗ ಹಾಗು ಚುನಾವಣಾ ಆಯೋಗದ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ .
ಭಾರತೀಯ ನಾಗರಿಕ ಸೇವೆಗಳುಕೇಂದ್ರ ಲೋಕ ಸೇವಾ ಆಯೋಗ ಇಂಗ್ಲೀಷ್ ವಿಕಿ ಆವೃತ್ತಿ
ಕೇಂದ್ರ ಲೋಕ ಸೇವಾ ಆಯೋಗದ ಹಾಲಿ ಮುಖ್ಯಸ್ಥರು ಹಾಗು ಸದಸ್ಯರ ವಿವರಗಳು.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment