Commit b8f6752b authored by Narendra VG's avatar Narendra VG

Upload New File

parent 6747a5cf
ಸೈಮನ್ ಆಯೋಗವು ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಬಗ್ಗೆ ಚರ್ಚೆ ನಡೆಸಲು ಬಂದ ಏಳು ಬ್ರಿಟಿಷ್ ಸಂಸತ್ಸದಸ್ಯರ ತಂಡ .
ತಂಡದ ಅಧ್ಯಕ್ಷತೆ ವಹಿಸಿದ್ದ ಸರ್ ಜಾನ್ ಸೈಮನ್ ಅವರ ಹೆಸರಿನಲ್ಲಿ ಈ ಆಯೋಗ ಜನಪ್ರಿಯವಾಯಿತು .
ಕಾಕತಾಳೀಯ ವಾಗಿ ಆಯೋಗದ ಒಬ್ಬ ಸದಸ್ಯ ಕ್ಲೆಮೆಂಟ್ ಆಟ್ಲೀ ಬ್ರಿಟಿಷ್ ಸರಕಾರದಿಂದ ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯ ಪಡೆಯುವಾಗ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದನು .
ಆದರೆ ಈ ಆಯೋಗದಲ್ಲಿ ಒಬ್ಬ ಭಾರತೀಯನೂ ಇಲ್ಲದಿದ್ದದ್ದನ್ನು ಕಂಡು ಕೆಂಡಾಮಂಡಲರಾದರು ಭಾರತೀಯರು .
ಈ ಕಾರಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಆಯೋಗವನ್ನು ಬಹಿಷ್ಕರಿಸಲು ನಿರ್ಧರಿಸಿತು .
ಮುಸ್ಲಿಂ ಲೀಗ್ ಪಕ್ಷದ ಒಂದು ಬಣ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿತು .
ಫೆಬ್ರವರಿ ೩ ,೧೯೨೮ರ ಂದು ಮುಂಬಯಿಗೆ ಬಂದಿಳಿದ ಆಯೋಗ ಪ್ರದರ್ಶನಕಾರರ ಧಿಕ್ಕಾರದ ಘೋಷಣೆಗಳನ್ನು ಎದುರಿಸಬೇಕಾಯಿತು .
ಇಡೀ ದೇಶ ಹರತಾಳದಲ್ಲಿರುವಂತೆ ಕಂಡು ಬಂದಿತು .
ಆಯೋಗವು ತನ್ನ ೧೭ ಸಂಪುಟಗಳ ವರದಿಯನ್ನು ೧೯೩೦ರಲ್ಲಿ ಪ್ರಕಾಶಿಸಿತು .
ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ - ಮುಸ್ಲಿಮರಿಗೆ ಪ್ರತ್ಯೇಕ ಕೋಮು ಆಧರಿತ ಚುನಾವಣೆ ಪ್ರಕ್ರಿಯೆಗಳನ್ನು ಶಿಫಾರಸು ಮಾಡಿತು .
ಸೈಮನ್ ಆಯೋಗ ಪರಿಣಾಮವಾಗಿ ೧೯೩೫ರ ಭಾರತ ಸರಕಾರ ಕಾಯ್ದೆ ಹೊರಬಂದು , ೧೯೩೭ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಬಹುಮತದಿಂದ ಆಯ್ಕೆಯಾಗಿತು .
ನಂತರ ಸ್ವತಂತ್ರ ಭಾರತದ ಸಂವಿಧಾನದ ಮೇಲೆಯೂ ಈ ಆಯೋಗದ ಪ್ರಭಾವವಿದ್ದಿತು .
ಸೈಮನ್ ಆಯೋಗದ ಬಹಿಷ್ಕಾರ.
ಸೈಮನ್ ಆಯೋಗ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment